ಚಾಮರಾಜನಗರ : ರಾಜ್ಯ ಸರ್ಕಾರ
ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವ
ಕ್ರಮ ಖಂಡಿಸಿ ಚಾಮರಾಜನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಿತು.
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ,ಜಮಾಯಿಸಿದ ಪ್ರತಿಭಟನಾಕಾರರು ತಳ್ಳುವ ಗಾಡಿಯಲ್ಲಿ ಬೈಕ್ಇರಿಸಿ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ
ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು,ಸಿದ್ದರಾಮಯ್ಯ ಕೆಟ್ಟ ಮನಸ್ಥಿತಿಯಿಂದ ಪ್ರತಿಯೊಂದಕ್ಕೂ ಕೇಂದ್ರಸರ್ಕಾರವನ್ನು ದೂರುತ್ತಾರೆ. ಕೇಂದ್ರ ಸರ್ಕಾರ ಜಾಸ್ತಿ ಮಾಡಿರುವ
ದರಗಳಲ್ಲ. ರಾಜ್ಯ ಸರ್ಕಾರ ಮಾರಾಟ ತೆರಿಗೆಯಲ್ಲಿ ದರ ಏರಿಕೆ ಮಾಡಲಾಗಿದೆ ಎಂದರು.
ಯಾಕೆ ಜಾಸ್ತಿ ಮಾಡಲಾಗಿದೆ ಅಂತ ಅವರ ಸರ್ಕಾರದ
ಮಂತ್ರಿಗಳಾದ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಗ್ಯಾರಂಟಿಗಳಿಗೆ ಹಣ ಕೊಡಲು ದುಡ್ಡಿಲ್ಲ ಹಾಗಾಗಿ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆತಂದಾಗ ಪೆಟ್ರೋಲ್, ಡೀಸೆಲ್, ಗೊಬ್ಬರ, ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿ ಎಲ್ಲವನ್ನು
ಜಾಸ್ತಿ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಇರುವ ಕಡೆ ದರ ಜಾಸ್ತಿ ಇದೆ. ಕರ್ನಾಟಕ,ತೆಲಂಗಾಣ, ತಮಿಳುನಾಡು ಜಾಸ್ತಿ ಇದೆ. ಬಿಜೆಪಿ ಇರುವ ಕಡೆಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ರಾಜ್ಯಗಳಲ್ಲಿಕಡಿಮೆ ಇದೆ. ಸಂವಿಧಾನ ಉಳಿಸುವ ಬೊಗಳೆ ಬಿಡುತ್ತಾರೆಯೋ ಅವರು ಸಂವಿಧಾನ ವಿರೋಧಿಗಳು ಎಂದು ಕುಟುಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ದರಗಳನ್ನುಜಾಸ್ತಿ ಮಾಡಲಾಗಿದೆ. ಜನಸಾಮಾನ್ಯರ ಸರ್ಕಾರವಲ್ಲ.ಜಾಹೀರಾತು ಕೊಡುವುದನ್ನು ಬಿಡಬೇಕು. ಸಾಮಾನ್ಯ ಜನರಿಗೆತೊಂದರೆಯಾಗುತ್ತಿದೆ. ಕಾಂಗ್ರೆಸ್‌ನವರು ನೈತಿಕತೆಯನ್ನು
ಕಳೆದುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ತಿರಸ್ಕಾರ ಮಾಡಲಾಗಿದೆ. ಅಲ್ಲದೆ ಹಲವು ಹಗರಣಗಳನ್ನು ಮಾಡಿದ್ದಾರೆ
ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಹಿಂದುಳಿಸ ಮೋರ್ಚಾ ಅಧ್ಯಕ್ಷ ಹನೂರು ವೆಂಕಟೇಶ್, ಮಾಜಿ ಶಾಸಕ ಎಸ್.ಬಾಲರಾಜ್,
ಮುಖಂಡರಾದ ಎಂ.ರಾಮಚಂದ್ರ, ನೂರೊಂದುಶೆಟ್ಟಿ, ನಿಜಗುಣ ರಾಜು, ಅರಕಲವಾಡಿ ನಾಗೇಂದ್ರ, ಹೊನ್ನೂರು ಮಹದೇವಸ್ವಾಮಿ,
ಪ್ರಣಯ್ ಸೇರಿದಂತೆ ಇತರರು ಭಾಗವಹಿಸಿದ್ದರು.