– ನಂಜನಗೂಡಿನಲ್ಲಿ ದರ್ಶನ್ ಧ್ರುವಗೆ ಜೆಡಿಎಸ್ ಬಲ!?
ಮೈಸೂರು : ತಿಂಗಳ ಅಂತರದಲ್ಲಿ ತಂದೆ ಧ್ರುವ ನಾರಾಯಣ್ ಹಾಗೂ ತಾಯಿ ವೀಣಾ ಕಳೆದುಕೊಂಡು ದರ್ಶನ್ ಹಾಗೂ ಧೀರನ್ ಅನಾಥರಗಿದ್ದಾರೆ. ಈ ಹಿನ್ನಲೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ದರ್ಶನ್ ಧ್ರುವ ನಾರಾಯಣ್ ಬೆಂಬಲಿಸಲು ಮುಂದಾಗಿದೆ.

ಧ್ರುವ ನಾರಾಯಣ್ ಬದುಕಿದ್ದರೆ ಈ ಬಾರಿ ನಂಜನಗೂಡು ವಿಧಾನಸಭಾ ಚುನಾಣೆಯಲ್ಲಿ ಸ್ಪರ್ದೆ ಮಾಡುತ್ತಿದ್ದರು, ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಮಗ ದರ್ಶನ್ ಧ್ರುವ ನಾರಾಯಣ್ ಗೆ ಟಿಕೆಟ್ ನೀಡಿದೆ. ಕಳೆದ ಕೆಲ ದಿನಗಳಿಂದ ದರ್ಶನ್ ಕೂಡ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದರು. ಹೀಗಿರುವಾಗ ಒಂದು ತಾಯಿ ವೀಣಾ ಧ್ರುವ ನಾರಾಯಣ್ ಕೂಡ ವಿಧಿವಶರಾಗಿದ್ದು ದರ್ಶನ್ ಹಾಗೂ ಅವರ ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ.

ನಂಜನಗೂಡು ಕ್ಷೇತ್ರದಲ್ಲಿ ಈಗಾಗಲೇ ಪಕ್ಷತಿವಾಗಿ ಅನೇಕ ನಾಯಕರು ದರ್ಶನ್ ಧ್ರುವ ಅವರನ್ನು ಬೆಂಬಲಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಂದೆಯನ್ನು ಕಳೆದುಕೊಂಡ ದುಃಖ ಮಾಸುವ ಮುನ್ನವೇ ದರ್ಶನ್ ತಾಯಿಯನ್ನು ಕಳೆದುಕೊಂಡಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ನಾವು ಅವರ ವಿರುದ್ಧ ಸ್ಪರ್ದೆ ಮಾಡಲು ಮನಸ್ಸು ಒಪ್ಪುತ್ತಿಲ್ಲ, ಈ ಬಗ್ಗೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ