ನಂಜನಗೂಡು: ಬಿಜೆಪಿಯಲ್ಲಿ ಅಸಮದಾನ ಭುಗಿಲೆದಿದ್ದು ,ಅದರ ಪರಿಣಾಮ ನಗರಸಭಾ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
ಸ್ಥಳೀಯ ಬಿಜೆಪಿ ಘಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರಷ್ಟೆ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ ಎಂದು ಪಕ್ಷದ ಪ್ರಮುಖ ಕಾರ್ಯ ಕರ್ತರು ಅಸಮಾಧಾನ ಗೊಂಡಿದ್ದರು ಎನ್ನಲಾಗಿದೆ ಇದರಲ್ಲಿ ಬಿಜೆಪಿಯ ಕೆಲ ನಗರಸಭಾ ಸದಸ್ಯರು ಸೇರಿದ್ದರು.

ಆದರೆ ಇದನ್ನರಿತ ಪಕ್ಷದ ಪ್ರಮುಖ ಮುಖಂಡ ರುಗಳನ್ನು ಸಂಸದ ವಿ.ಶ್ರೀ ನಿವಾಸ್ ಪ್ರಸಾದ್ ಅಸಮದಾನಿತರನ್ನು ಶಮನ ಪಡಿಸಿದ್ದರು, ಆದರೆ ಇದನ್ನು ಮೀರಿ ಕೆಲ ಮುಖಂಡರು ,ಮೇಲ್ನೋಟಕ್ಕೆ ಶಮನಗೊಂಡರು ಒಳಗೊಳಗೆ ಹೊಗೆಯಾಡುತ್ತಿದ್ದು ಇಂದು ಪಕ್ಷದ ಪ್ರಮುಖ ರಾದ ,ನಗರಸಭಾ ಮಾಜಿ ಉಪದ್ಯಕ್ಷ,ಹಾಲಿ ಸದಸ್ಯ ದೊರೆಸ್ವಾಮಿ ಬುದುವಾರ ರಾಜೀನಾಮೆ ಸಲ್ಲಿಸಿದ್ದಾರೆ.

ದೊರೆಸ್ವಾಮಿರವರು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಪುರಸಭೆಗೆ ಆಯ್ಕೆಯಾಗಿದ್ದು, ಒಮ್ಮೆ ಪುರಸಭೆಯ ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿ ನಗರದ ೨೦ನೇ ವಾರ್ಡಿನಿಂದ ನಗರಸಭೆಗೆ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದರು.
ಮಾಜಿ ಸಚಿವ ದಿವಂಗತ ಬೆಂಕಿ ಮಹದೇವಪ್ಪನವರ ಸಮ್ಮುಖದಲ್ಲಿ ರಾಜಕೀಯ ಪ್ರವೇಶ ಮಾಡಿ ಪುರಸಭೆಗೆ ಆಯ್ಕೆಯಾದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಅವರೋಂದಿಗೆ ಬಿಜೆಪಿ ಸೇರಿದ್ದರು.ಇತ್ತೀಚಿನ ದಿನಗಳಲ್ಲಿ ಅವರೊಂದಿಗೆ ಅಂತರ ಕಾಯ್ದು ಕೊಂಡಿದ್ದರು.ಮಾಜಿ ಸಂಸದ ಆರ್.ಧ್ರುವನಾರಾಯಣ್ ರವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ಇವರ ರಾಜೀನಾಮೆ ಯಿಂದಾಗಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಲಿದ್ದು, ಶೀಘ್ರದಲ್ಲೇ ಪ್ರಮುಖ ಮುಖಂಡರುಗಳೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾದ್ಯತೆಗಳು ಹೆಚ್ಚಿವೆ .ಮುಂದಿನ ದಿನಗಳಲ್ಲಿ ಇನ್ನು ಹಲವು ಪ್ರಮುಖರು ಕಾಂಗ್ರೆಸ್ ಪಕ್ಷ ಸೇರುವ ಸಾದ್ಯತೆಗಳಿವೆ.