– ಚಾಮುಂಡೇಶ್ವರಿಯಲ್ಲಿ ಜಿಟಿಡಿ V/S ಸಿದ್ದೇಗೌಡ
– ಜೆಡಿಎಸ್ ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಮೈಸೂರು : ಕಳೆದ ವಿಧಾನಸಭೆ ಚನಾವಣೆಯಲ್ಲಿ ಕುಚಿಕುಗಳಾಗಿದ್ದ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಜಿಟಿ ದೇವೇಗೌಡ ಈ ಬಾರಿ ನಾನಾ ನೀನಾ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತೊಡೆ ತಟ್ಟಿದ್ದಾರೆ.

ಕಾಂಗ್ರೆಸ್ನಿಂದ ಟಿಕೆಟ್ ಗಿಟ್ಟಿಸಿರುವ ಸಿದ್ದೇಗೌಡರು ಈ ಬಾರಿ ಜಿಟಿ ದೇವೇಗೌಡರನ್ನು ಸೋಲಿಸಿಯೇ ಸಿದ್ದ ಎಂದು ಕ್ಷೇತ್ರದ ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದಾರೆ. ಜಿಟಿ ದೇವೇಗೌಡರ ಹಣ ಬೆಂಬಲ ಗೆಲ್ಲುತ್ತೋ ನನ್ನ ಜನ ಬೆಂಬಲ ಗೆಲ್ಲೋತ್ತೋ ನೋಡಣ ಎಂದು ಸಾವಾಲು ಹಾಕಿದ್ದಾರೆ.
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಟಿ ದೇವೇಗೌಡ ಈ ಕ್ಷೇತ್ರದಲ್ಲಿ ಮುಖಾಮುಖಿಯಾಗಿದ್ದರು, ಸಿದ್ದರಾಮಯ್ಯ ಸೋಲಿಗೆ ಬಲೆ ಹೆಣೆದಿದ್ದ ಸಿದ್ದೇಗೌಡ ಬಣ, ಈ ಬಾರಿ ಜಿಟಿ ದೇವೇಗೌಡರನ್ನು ಸೋಲಿಸಲು ಕ್ಷೇತ್ರದಲ್ಲಿ ಪ್ರಚಾರ ಜೊತೆಗೆ ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ
ಇತ್ತ ಜಿಟಿ ದೇವೇಗೌಡ ಕಾರ್ಯಕರ್ತರ ಜೊತೆ ಸಭೆ ಮಾಡಿ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು ವಿಜಯ ಲಕ್ಷ್ಮಿ ಯಾರ ಪರ ಒಲಿಯುತ್ತಲೋ ಕಾದು ನೋಡಬೇಕಿದೆ.