ಮೈಸೂರು: ಧ್ರುವ ನಾರಾಯಣ್ ಪತ್ನಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಶಾಸಕ ಅನಿಲ್ ಚಿಕ್ಕಮಾದು, ಸಾ.ರಾ. ಮಹೇಶ್ ಸೇರಿದಂತೆ ಅನೇಕ ನಾಯಕರು ಬೇಟಿ ನೀಡಿ ಧ್ರುವ ನಾರಾಯಣ್ ಪುತ್ರರಿಗೆ ಧೈರ್ಯ ಹೇಳಿದ್ದಾರೆ.

ಕಾಂಗ್ರೆಸ್ ನ ಪ್ರಮುಖ ರಾಜ್ಯ ನಾಯಕರು ದರ್ಶನ್ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿ ನಿಮ್ಮ ಜೊತೆ ನಾವಿದ್ದೇವೆ ಎಂದು ದೈರ್ಯ ತುಂಬಿದ್ದಾರೆ

ನಾಳೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಇಂದು ಸಂಜೆ 4 ಗಂಟೆಯ ನಂತರ ಹೆಗ್ಗವಾಡಿ ಗ್ರಾಮಕ್ಕೆ ಪಾರ್ಥೀವ ಶರೀರ ರವಾನೆಯಾಗಲಿದೆ . ತಿಂಗಳ ಅಂತರದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ದರ್ಶನ್ ಹಾಗೂ ಧಿರನ್ ಕಂಡು ಆಸ್ಪತ್ರೆಯ ಹೊರಗಡೆ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ