– ದರ್ಶನ್ ಧ್ರುವ ಬಾಳಲ್ಲಿ ವಿಧಿಯಾಟ
– ತಂದೆ ಕಳೆದುಕೊಂಡ ತಿಂಗಳ ಅಂತರದಲ್ಲಿ ತಾಯಿಯು ನಿಧನ
ನಂಜನಗೂಡು : ಮಾಜಿ ಸಂಸದ ದಿ.ಧ್ರುವ ನಾರಾಯಣ್ ಮಡದಿ ವೀಣಾ ಧ್ರುವನಾರಾಯಣ್ (50) ಅನಾರೋಗ್ಯದಿಂದ ಇಂದು ಬೆಳಿಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಹೋಲೋಕ ತ್ಯಜಿಸಿದ್ದಾರೆ. ತಂದೆಯನ್ನು ಕಳೆದುಕೊಂಡು ಅನಾಥವಾಗಿದ್ದ ದರ್ಶನ್ ಇದೀಗ ತಾಯಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದಾರೆ
ಕೆಲವೇ ತಿಂಗಳ ಅಂತರದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ದಿಕ್ಕು ತೋಚದೆ ದರ್ಶನ್ ಬಾಳಲ್ಲಿ ವಿಧಿ ಘೋರ ನರ್ತನ ಮಾಡಿರುವುದು ನಿಜಕ್ಕೂ ಶೋಚನೀಯ.