ಮೈಸೂರು: ಛಲವಾದಿ ನಾರಾಯಣ ಸ್ವಾಮಿ ಆರ್.ಎಸ್.ಎಸ್ ಕೃಪ ಪೋಷಿತ ನಾಟಕ ಮಂಡಳಿಯಲ್ಲಿ ನಟನಾಗಿ ನಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಗರ ವಕ್ತಾರ ರಾಜೇಶ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾರಾಯಣ ಸ್ವಾಮಿ ಆರ್.ಎಸ್.ಎಸ್ ನಾಯಕರ ಚಡ್ಡಿ ವಾಶ್ ಮಾಡಲು ಯೋಗ್ಯರಗಿದ್ದಾರೆ. ಇಂತವರಿಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ, ಮೋದಿಯವರೇ ವಡೋದರ ಹಾಗೂ ವಾರಣಾಸಿ ಎರಡು ಕ್ಷೇತ್ರದಲ್ಲಿ ಸ್ಪರ್ದೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕರ್ನಾಟಕದಲ್ಲಿ ಎಲ್ಲೆ ನಿಂತರು ಗೆಲ್ಲುತ್ತಾರೆ, ಸಿದ್ದರಾಮಯ್ಯನವರನ್ನು ಬೈಯುವ ಮೂಲಕ ನೀವು ಬಿಜೆಪಿ ಹಾಗೂ ಆರ್.ಎಸ್.ಎಸ್ ಅವರನ್ನು ಓಲೈಸಿಕೊಳ್ಳಲು ಈ ರೀತಿ ಟೀಕೆ ಮಾಡುವುದು ಸರಿಯಲ್ಲ ಹಿಂದುಳಿದ ವರ್ಗಗಳ ಅಭಿವೃದ್ದಿಯ ಹರಿಕಾರ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮುನ್ನ ನೂರು ಬಾರಿ ಯೋಚಿಸಿಬೇಕು ಎಂದು ಕಿಡಿಕಾರಿದರು.
ನಿಮಗೆ ನಿಜವಾಗಿಯೂ ದೈರ್ಯವಿದ್ದರೆ ಮೀಸಲಾತಿ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ಕಳುಹಿಸಿ ಕೊಡಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಅದನ್ನು ಮಾಡಿದರೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗುತ್ತಾನೆ ಎಂಬ ಭಯದಿಂದ ಸಿದ್ದರಾಮಯ್ಯರನ್ನು ದೂರಬೇಡಿ ಎಂದು ಎಚ್ಚರಿಸಿದರು.