ವರುಣದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ಬಿಜೆಪಿ ಹೈ ಕಮಾಂಡ್ ಗೆ ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಚೆಕ್ ಮೇಟ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ
ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಮಗನಿಗೆ ಬಿಜೆಪಿ ಹೈ ಕಮಾಂಡ್ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪನವರ ಮನಸ್ಸಿನಿಂದ ಮಾಸಿದಂತೆ ಕಾಣುತ್ತಿಲ್ಲ. ಆದ್ದರಿಂದಲೇ ಈ ಬಾರಿ ಯಡಿಯೂರಪ್ಪ ಪ್ಲಾನ್ ಗೆ ಹೈಕಮಾಂಡ್ ತಬ್ಬಿಬ್ಬಾಗಿದೆ
ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನುವ ಮೂಲಕ ಯಡಿಯೂರಪ್ಪ ಮಾಸ್ಟರ್ ಕಾರ್ಡ್ ಪ್ಲೆ ಮಾಡಿದ್ದಾರೆ
ವರುಣದಲ್ಲಿ ವಿಜಯೇಂದ್ರ ಸ್ಪರ್ದಿಸುವಂತೆ ಕಾರ್ಯಕರ್ತರ ಒತ್ತಡ ಹೆಚ್ಚಿದೆ, ಇನ್ನೊಂದು ಕಡೆ ಸಿದ್ದರಾಮಯ್ಯ ವರುಣಾಕ್ಕೆ ವಾಪಸ್ ಬಂದಿದ್ದಾರೆ. ಅವರನ್ನು ಕಟ್ಟಿಹಾಕಲು ವಿಜಯೇಂದ್ರ ಅವರಿಗೆ ಮಾತ್ರ ಸಾದ್ಯ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗಿರುವಾಗ ವರುಣಾ ಹಾಗೂ ಶಿಕಾರಿಪುರ ಎರಡು ಕಡೆ ಟಿಕೆಟ್ ಕೊಟ್ಟರೆ ಮಾತ್ರ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎನ್ನುತ್ತಿದ್ದಾರೆ ಯಡಿಯೂರಪ್ಪ ಆಪ್ತ ಮೂಲಗಳು
ಏನಿದು ಬಿ.ಎಸ್.ವೈ ದಾಳ?
ಯಡಿಯೂರಪ್ಪರನ್ನು ಕಟ್ಟಿಹಾಕಲು ಬಿಜೆಪಿಯ ಕೆಲ ನಾಯಕರು ಹಿಂದಿನಿಂದಲೂ ವಿಫಲ ಯತ್ನ ಮಾಡಿಕೊಂಡೆ ಬಂದಿದ್ದಾರೆ. ಈಗ ಅವರ ಟಾರ್ಗೆಟ್ ವಿಜಯೇಂದ್ರ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಪಕ್ಷವನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಿಗಿ ಹಿಡಿತದಿಂದ ಬಿಡಿಸಲು ಬಿಜೆಪಿ ಹೈಕಮಾಂಡ್ ಈಗಾಗಲೇ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸಿ ಕಸರತ್ತು ನಡೆಸಿದ್ದು, ಮಗನ ಭವಿಷ್ಯವನ್ನು ಭದ್ರ ಮಾಡುವ ಸಲುವಾಗಿ ಯಡಿಯೂರಪ್ಪ ವಿಜಯೇಂದ್ರ ಅವರಿಗೆ ಚಕೃವ್ಯೂಹದಲ್ಲಿ ಸಿಲುಕಬೇಡ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಬಲ ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಎಂದು ಈಗಾಗಲೇ ವಿಜಯೇಂದ್ರ ಗುರುತಿಸಿಕೊಂಡಿದ್ದಾರೆ, ಹಾಗಾಗಿ ಯಡಿಯೂರಪ್ಪ ಮಗನ ರಾಜಕೀಯ ಭವಿಷ್ಯಕ್ಕೆ ಪೂರಕವಾದ ಹೆಜ್ಜೆ ಇಡುವಂತೆ ಸೂಚನೆ ನೀಡಿದ್ದಾರೆ. ಅವರ ಈ ಸೂಚನೆ ಹೈ ಕಮಾಂಡ್ ತಲೆ ಬಿಸಿ ಮಾಡುವಂತೆ ಮಾಡಿದೆ.