ಮ್ಯಾಜಿಕ್ ಸಂಖ್ಯೆ ಮುಟ್ಟಲು ಡಿಕೆ ಶಿವಕುಮಾರ್ ‘ಕೈ’ ಚಳಕ
ಬಿಜೆಪಿ ಪ್ರಭಾವಿ ನಾಯಕರುಗಳನ್ನು ಸೆಳೆಯಲು ಡಿ.ಕೆ.ಶಿ ಹೊಸ ತಂತ್ರ
ಸಚಿವ ಸ್ಥಾನದ ಜೊತೆಗೆ ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ
ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ಸಮೀಕ್ಷೆಗಳ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ಮುಟ್ಟಲು ಹೊಸ ತಂತ್ರ ಹೆಣೆದಿದ್ದಾರೆ. ಟ್ರಬಲ್ ಶೂಟರ್ ಡಿಕೆಶಿ ಬಿಜೆಪಿ ಜೇನುಗೂಡಿಗೆ ಕೈಹಾಕಲು ಮುಂದಾಗಿದ್ದಾರೆ
ಬಿಜೆಪಿ ಪ್ರಭಾವಿ ನಾಯಕರನ್ನು ಸೆಳೆಯಲು ಕ್ಷೇತ್ರವನ್ನು ಬಿಟ್ಟು ಕೊಡುವುದರ ಜೊತೆಗೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನವನ್ನು ಕೊಡುವ ಭರವಸೆಯನ್ನು ಕೈ ಮುಖಂಡರು ತಿಳಿಸಿದ್ದಾರೆ.
ಯಾವ ಸಚಿವ ಸ್ಥಾನಕ್ಕಾಗಿ ಬಿಜೆಪಿಗೆ ಹೋಗಿದ್ದೀರಿ ನಿಮಗೆ ಅದೇ ಅಧಿಕಾರವನ್ನು ನಾವು ನೀಡುತ್ತೇವೆ.ಆಪರೇಷನ್ ಕಮಲದಲ್ಲಿ ಬಿಜೆಪಿ ಮಾಡಿದ ಕಾರ್ಯತಂತ್ರವನ್ನೇ ಕಾಂಗ್ರೆಸ್ ಈಗ ಮಾಡುತ್ತಿದೆ.
ಡಿಕೆ ಶಿವಕುಮಾರ್ ಅವರ ಈ ನಿರ್ಧಾರ ಚುನಾವಣೆಯ ಸಂದರ್ಭದಲ್ಲಿ ಚರ್ಚೆಗೆ ಗ್ರಾಸವಾಗಿದೆ