ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಪರಿಷ್ಕರಣೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ
ಮೀಸಲಾತಿಯನ್ನು ಬಿಜೆಪಿಯವರು ಕುಲಗೆಡಿಸಿದಷ್ಟು ಬೇರೆ ಇನ್ಯಾರು ಕುಲಗೆಡಿಸಿಲ್ಲ, ತಮಿಳುನಾಡು ಹೊರತುಪಡಿಸಿದರೇ ದೇಶದ ಬೇರಾವುದೇ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ 50% ದಾಟಿಲ್ಲ ಎಂದರು.
ರಾಜ್ಯದಲ್ಲೂ ಮೀಸಲಾತಿ ಪ್ರಮಾಣ 50% ಕ್ಕಿಂತ ಹೆಚ್ಚಾಗಿ ನೀಡಲು ಸಾಧ್ಯವಿಲ್ಲ. ಅದು ಗೊತ್ತಿದ್ಧರೂ ಸಹ ಚುನಾವಣೆ ಗಮನದಲ್ಲಿಟ್ಟುಕೊಂಡು ಬೇಕಂತಲೇ ಮೀಸಲಾತಿ ಪರಿಷ್ಕರಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ