– ಕಣ್ಮುಚ್ಚಿ ಕುಳಿತ ಉದ್ದೂರು ಕಾವಲು ಪಂಚಾಯಿತಿ ಆಡಳಿತ ಮಂಡಳಿ
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ತಿಂಗಳಾದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇತ್ತ ಗಮನಹರಿಸಿ ಸರಿಪಡಿಸದೆ ಕಂಡರೂ ಕಾಣದಂತೆ ವರ್ತಿಸುತ್ತಿದೆ. ವಿಶೇಷ ಎಂದರೆ ಈ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದ ಶೆಟ್ಟಿ ಅವರ ಮನೆಯ ಮುಂದೆ ಇಂತಹ ಒಂದು ಸಮಸ್ಯೆ ಉಂಟಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಗುಂಡಿಯಲ್ಲಿ ನೀರು ನಿಂತು ಕೊಳೆತು ಹುಳ ಆಗಿ ಅದೇ ನೀರು ಕುಡಿಯುವ ನೀರಿನಲ್ಲಿ ಸೇರುತ್ತಿರುವುದರಿಂದ ಗ್ರಾಮದಲ್ಲಿ ಮಕ್ಕಳು ವೃದ್ಧರ ಆರೋಗ್ಯ ಕೆಡುತ್ತಿದೆ. ಆದ್ದರಿಂದ ಈ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅದನ್ನು ಸರಿಪಡಿಸಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಸಂಬಂಧ ಪಟ್ಟ ಅಧಿಕಾರಿಗಳೆ ಹೊಣೆ ಆಗುತ್ತಾರೆ ಎಂದು ಗ್ರಾಮದ ಮುಖಂಡರಾದ ಕೃಷ್ಣ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು