ವರದಿ -ಸಂಘಟನೆ ಮಂಜುನಾಥ್ ಹೊಸೂರು
ಕೃಷ್ಣರಾಜನಗರ ಪುರಸಭೆ ಅಧಿಕಾರಿಗಳ ನಿರ್ಲಕ್ಷö್ಯದಿಂದ ಪಟ್ಟಣದ ಶ್ರೀಕೃಷ್ಣರಾಜೇಂದ್ರವೃತ್ತದಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ ದೈವಸ್ವರೂಪಿಯಾದ ಗರುಢಗಂಬ ಇಂದು ಮೃತಪಟ್ಟವರ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಪ್ರಚಾರಕೇಂದ್ರವಾಗಿ ಮಾರ್ಪಾಟಾಗಿದ್ದು ಅದರ ಅಸ್ತಿತ್ವಕ್ಕೆ ಧಕ್ಕೆಯುಂಟಾಗಿ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಕೃಷ್ಣರಾಜಸಾಗರ ನಿರ್ಮಾಣದ ಸಂಧರ್ಭದಲ್ಲಿ ಎಡತೊರೆ ಎಂಬಗ್ರಾಮ ಕಾವೇರಿ ನೀರಿನಲ್ಲಿ ಮುಳುಗಿದಾಗ ಮೈಸೂರುಮಹಾರಾಜ ನಾಲ್ವಡಿಕೃಷ್ಣರಾಜಒಡೆಯರ್‌ರವರು ೧೯೩೫ರಲ್ಲಿ ೨ಕಿಮೀ ದೂರದ ಎತ್ತರದ ಪ್ರದೇಶಕ್ಕೆ ಊರನ್ನು ಸ್ಥಳಾಂತರಿಸಿ ಅದಕ್ಕೆ ಕೃಷ್ಣರಾಜನಗರ ಎಂದು ಹೆಸರನ್ನಿಟ್ಟು ಅದರ ಕುರುಹಾಗಿ ಊರಿನಮಧ್ಯದಲ್ಲಿ ದೈವಸ್ವರೂಪಿಯಾದ ಗರುಢಗಂಬವನ್ನು ಸ್ಥಾಪಿಸಿದ್ದರು. ಎಲ್ಲರ ಆಕರ್ಷಣೀಯ ಕೇಂದ್ರವಾಗಿರುವ ಶ್ರೀಕೃಷ್ಣರಾಜೇಂದ್ರವೃತ್ತ ಎಂದು ನಾಮಾಂಕಿತವಾದ ವೃತ್ತವು ಗರುಢಗಂಬ ವೃತ್ತ ಎಂದೇ ಚಿರಪರಿತವಾಗಿದೆ.
ದೇವಾಲಯದ ಮುಂದೆ ಗರುಢಗಂಬ ಇರುವುದು ಸಹಜ ಆದರೆ ಅಂದು ಊರು ನಿರ್ಮಾಣ ಮಾಡಿದಾಗ ಮೈಸೂರುಮಹಾರಾಜರು ಊರಿಗೆ ಒಳ್ಳೇದಾಗಲಿ ಎಂದು ಹಾರೈಸಿ ಗರುಢಗಂಬವನ್ನು ಪ್ರತಿಷ್ಠಾಪಿಸಿ ಅದಕ್ಕೆ ಸುತ್ತಲೂ ಅಲಂಕೃತ ಕಬ್ಬಿಣದ ಸರಪಳಿಯ ಸುರಕ್ಷತೆಯನ್ನು ಅಳವಡಿಸಿ ಸಂರಕ್ಷಿತ ಪ್ರದೇಶವಾಗಿ ನಿರ್ಮಾಣ ಮಾಡಿದ್ದರು.
ಇಂದು ಸಂಬAಧಪಟ್ಟ ಪುರಸಭೆ ಆಡಳಿತದ ನಿರ್ಲಕ್ಷö್ಯದಕಾರಣ ಯಾವುದೆ ಒಂದು ರಾಜಕೀಯ ಪಕ್ಷದ ಬ್ಯಾನರ್, ಪೋಸ್ಟರ್, ಯಾವುದೆ ಕಾರ್ಯಕ್ರಮಗಳು ನಡೆದರೆ ಅದರಮೇಲೆ ಹತ್ತಿ ಲೈಟಿಂಗ್ ಹಾಗೂ ಬಾವುಟ ಕಟ್ಟುವುದು ಸಾಮಾನ್ಯವಾಗಿದ್ದು ಇದರಿಂದ ಗರುಢಗಂಬಕ್ಕೆ ಅಗೌರವ ಸಲ್ಲಿಸುವ ಪರಿಪಾಠ ಮುಂದುವರೆದಿದೆಯಲ್ಲದೆ ಈಗಾಗಲೆ ರಕ್ಷಣೆಗಾಗಿ ಹಾಕಲಾಗಿದ್ದ ಕಬ್ಬಿಣದ ಸರಳು ಹಾಗೂ ಕಲ್ಲಿನ ಕಂಬಗಳು ಮುರಿದುಬಿದ್ದಿದ್ದು ಅದರ ದುರಸ್ಥಿಗೂಸಹ ಕ್ರಮ ಕೈಗೊಳ್ಳದಿರುವುದು ಕಂಬದ ಅಸ್ತಿತ್ವಕ್ಕೆ ಧಕ್ಕೆಯುಂಟಾಗಿದೆ ಎಂದು ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಒಂದು ಹೆಜ್ಜೆ ಮುಂದೆಹೋಗಿ ಪಟ್ಟಣ ಸೇರಿದಂತೆ ಅಕ್ಕಪಕ್ಕ ಗ್ರಾಮದ ಯಾರೇ ಮೃತಪಟ್ಟರೆ ನೇರ ಮೃತಪಟ್ಟವರ ಫ್ಲೆಕ್ಸ್ ತಂದು ಗರುಢಗಂಬ ಮುಂದೆ ಹಾಕುವುದು ಸಾಮಾನ್ಯವಾಗಿದ್ದು ಮೃತಪಟ್ಟವರ ಫ್ಲೆಕ್ಸ್ಹಾಕಿದರೆ ವಾರಗಟ್ಟಲೆ ಅಲ್ಲೆ ಇರುವುದರಿಂದ ಪ್ರಯಾಣಿಕರ ದೃಷ್ಟಿ ಬೇರೆಡೆಹರಿದು ಅಪಘಾತಗಳಿಗೂ ಕಾರಣವಾಗಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಟ್ಟಣದ ಜನತೆ ಮುಂದಾದರೂ ಸಂಬAಧಪಟ್ಟ ಪುರಸಭೆ ಅಧಿಕಾರಿಗಳು ಕ್ರಮಕೈಗೊಂಡು ದೈವಸ್ವರೂಪಿಯಾದ ಗರುಢಗಂಬದಮೇಲೆ ಹತ್ತಿ ಯಾವುದೆ ಪೋಸ್ಟರ್, ಲೈಟಿಂಗ್ಸ್ ಇಲ್ಲವೆ ಫ್ಲೆಕ್ಸ್ ಅಳವಡಿಸುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.