ಮೈಸೂರು : ಕರಾಮುವಿ ಅಧ್ಯಾಪಕ ಹಾಗೂ ಆಡಳಿತ ಮಂಡಳಿ ಜಟಾಪಟಿ ಮುಂದುವರೆದಿದೆ.
ರಾಜ್ಯಪಾಲರು, ಸರ್ಕಾರ ಸ್ಪಷ್ಟ ಆದೇಶವಿದ್ದರೂ KSOU , ವ್ಯವಸ್ಥಾಪನ ಮಂಡಳಿ( BOM) ನಿರ್ಣಯವನ್ನು ಸಭೆ ಮುಗಿದು ತಿಂಗಳುಗಳೇ ಕಳೆದರು ಅವನ್ನು ಬಹಿರಂಗ ಪಡಿಸಿಲ್ಲ ಎಂದು ಆರೋಪಿಸಿ ಕರಾಮುವಿ ಕಛೇರಿ ಮುಂಭಾಗ ಖಾಯಂ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರೊ.ಜಗದೀಶ್ ಬಾಬು ಪ್ರತಿಭಟನೆ ನಡೆಸಿದರು.
ಆನ್ ಲೈನ್ ನಲ್ಲಿ BMO ಅಪ್ಲೋಡ್ ಆದ ಬಳಿಕ ಪ್ರತಿಭಟನೆ ಕೈಬಿಟ್ಟ ಜಗದೀಶ್ ಬಾಬು
ಸರ್ಕಾರದ ಸ್ಪಷ್ಟ ಆದೇಶವಿದ್ದರು ಯಾವ ಮಾಹಿತಿಯನ್ನೂ ಕೊಡದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಕರಾಮುವಿ ಖಾಯಂ ಶಿಕ್ಷಕ ಸಂಘದ ಕಾರ್ಯದರ್ಶಿ ಜಗದೀಶ್ ಬಾಬು
ಅವರಿಗೆ ಸಂಘದ ಇತರ ಅಧ್ಯಾಪಕರು ಸಾಥ್ ನೀಡಿದರು. ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು ವಿವಿಯ ಕುಲಪತಿಗಳು ಹಾಗೂ ಕುಲಸಚಿವರು ಮೌನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ