ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023.ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದಿನಿಂದ ತಾಲೀಮು ಆರಂಭವಾಗಿದೆ.
ಮೊದಲ ದಿನ ದಸರಾ ಗಜಪಡೆಯ ತೂಕ ಪರಿಶೀಲನೆ ಕಾರ್ಯ ನಡೆಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಹಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಇದಕ್ಕೂ ಮುನ್ನಾ ಅರಮನೆಯ ಬಲರಾಮ ದ್ವಾರದ ಮೂಲಕ ಹೊರಬಂದ ಅಭಿಮನ್ಯು ನೇತೃತ್ವದ ದಸರಾ ಗಜಪಡೆ.ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ಸಾಗಿದ ಸಾಗಿದವು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆನೆಗಳ ತೂಕ ಪರಿಶೀಲನೆ ನಡೆಯಿತು
ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು – 5,160 ಕೆ ಜಿ ತೂಕ
ವಿಜಯ – 2,830 ಕೆ ಜಿ
ಭೀಮ – 4,370 ಕೆ ಜಿ
ವರಲಕ್ಷ್ಮಿ – 3,020 ಕೆ ಜಿ
ಮಹೇಂದ್ರ – 4,530 ಕೆ ಜಿ
ಧನಂಜಯ – 4,940 ಕೆ ಜಿ
ಕಂಜನ್ – 4,240 ಕೆ ಜಿ
ಗೋಪಿ – 5,080 ಕೆ ಜಿ ತೂಕ.
ತೂಕ ಮಾಡಿದ ಆನೆಗಳ ಪೈಕಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವೇ ಅತ್ಯಂತ ಹೆಚ್ಚು ಬಲಶಾಲಿ ಎಂದು ತಿಳಿದು ಬಂದಿದೆ