ಮೈಸೂರು : ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ವಿಚಾರ ಇಂದು ಸಂಸದ ಪ್ರತಾಪ್ ಸಿಂಹ ಕಛೇರಿಗೆ ತೆರಳಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್
ದಾಖಲೆ ಸಲ್ಲಿಸಿ ಹೊರ ಬಂದರು.
ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನೆಂದು ಪ್ರಶ್ನೆ ಮಾಡಿದ್ದ ಪ್ರತಾಪ್ ಸಿಂಹ.ಪ್ರತಾಪ್ ಸಿಂಹ ಹೇಳಿಕೆಗೆ ಕಿಡಿಕಾರಿದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್.
ಇಂದು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದ ಲಕ್ಷ್ಮಣ್.
ಬಹಿರಂಗ ಚರ್ಚೆಗೆ ಆಗಮಿಸದ ಪ್ರತಾಪ್ ಸಿಂಹ.
ಸಂಸದರ ಕಚೇರಿ ಮುಂಭಾಗ ಪ್ರತಾಪ್ ಸಿಂಹಗಾಗಿ ಕಾದು ಕುಳಿತಿದ್ದ ಕಾಂಗ್ರೆಸ್ ನಾಯಕರು.ಪ್ರತಾಪ್ ಸಿಂಹ ಆಗಮಿಸದ ಹಿನ್ನೆಲೆ.ಪ್ರತಾಪ್ ಸಿಂಹ ಆಪ್ತ ಸಹಾಯಕರಿಗೆ ದಾಖಲೆ ಸಲ್ಲಿಸಿ ಹೊರ ನಡೆದ ಕಾಂಗ್ರೆಸ್ ನಾಯಕರು.
ಪರಸ್ಪರ ಆರೋಪ,ಪ್ರತ್ಯಾರೋಪಕ್ಕೆ ಸೀಮಿತವಾಯ್ತು ಬಿಜೆಪಿ,ಕಾಂಗ್ರೆಸ್ ನಾಯಕರ ಟೀಕಾಪ್ರಹಾರ.