ಮೈಸೂರು : ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಭೆ.
ಜಿಲ್ಲೆಯ ರೈತರ ಸಮಸ್ಯೆ ಬರ ಪರಿಹಾರ, ಮಳೆ ಹಾನಿ, ಬೆಳೆ ನಷ್ಟ, ಬೆಳೆ ವಿಮೆ, ಪರಿಹಾರ, ಕಬ್ಬು ಬೆಳೆಗಾರರು ಹಾಗೂ ಕಾಡಂಚಿನ ಪ್ರಾಣಿಗಳ ಹಾವಳಿ ಸಮಸ್ಯೆ ಕೃಷಿ ಪಂಪ್ ಶೆಟ್ಗಳ ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚೆ. ಮುಂದಿನ ಹಂತದ ಹೋರಾಟದ ರೂಪರೇಖೆಗಳನ್ನು ರೂಪಿಸಲು ರೈತರ ಸಮ್ಮುಖದಲ್ಲಿ ಸಭೆ. ಸಭೆಯಲ್ಲಿ ಹತ್ತಳ್ಳಿ ದೇವರಾಜ್ ಬರಡನಪುರ ನಾಗರಾಜು,ವೆಂಕಟೇಶ್ ಕಿರಗಸೂರು ಶಂಕರ್,ಕುರುಬೂರು ಸಿದ್ದೇಶ್ ಸೇರಿದಂತೆ ಹಲವು ರೈತರು ಭಾಗಿ.
ಬೆಳೆ ಪರಿಹಾರ ಸಮರ್ಪಕವಾಗಿ ವಿತರಣೆ ಆಗಬೇಕು,
ಪ್ರಕೃತಿ ವಿಕೋಪದಿಂದ ಆಗಿರುವ ಬೆಳೆಹಾನಿ ಸರ್ವೆ ಮಾಡಬೇಕು,ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು,ಬೆಳೆ ವೀಮೆ ಪ್ರಕ್ರಿಯೆ ಮಾಡಬೇಕು ರಾಜ್ಯ ಸರ್ಕಾರ ರೈತರ ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸವ ಕೆಲಸ ಮಾಡಬೇಕು. ಸರ್ಕಾರಕ್ಕೆ 20 ದಿನಗಳ ಗಡುವು ಕೊಡುತ್ತೇವೆ. ಅಲ್ಲಿವರಗೆ ರೈತರ ಸಮಸ್ಯೆಗಳನ್ನ ಪರಿಹರಿಸಬೇಕು. ಇಲ್ಲ ಅಂದರೆ ರಾಜ್ಯಾದ್ಯಂತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್.