ಮೈಸೂರು : ಪಿರಿಯಾಪಟ್ಟಣ ಗೊಲ್ಲರಬೀದಿ ಮನೆಯೊಂದರಲ್ಲಿ ದಂಪತಿ ಮೃತದೇಹ ಪತ್ತೆಯಾಗಿದೆ.ಪ್ರಕಾಶ್(47) ಹಾಗೂ ಯಶೋಧ(46) ಮೃತ ದಂಪತಿ.ತಾಲೂಕು ಪಂಚಾಯ್ತಿ ಟಿಬಿ ಬಳಿ ಟೀ ಅಂಗಡಿ ನಡೆಸುತ್ತಿರುವ ಪ್ರಕಾಶ್ ಹಾಗೂ ಯಶೋಧ ದಂಪತಿಗೆ ತನುಶ್ರೀ ಎಂಬ ಮಗಳಿದ್ದಾರೆ.ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ತನುಶ್ರೀ ಪಿಜಿಯಲ್ಲಿ ತಂಗಿದ್ದಾರೆ.ಮೊನ್ನೆ ರಾತ್ರಿ ಸಂಭಂಧಿಕರ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದ ದಂಪತಿ ಮನೆಯಲ್ಲಿ ಮಲಗಿದ್ದಾರೆ.ಮರುದಿನ ಮನೆಯಿಂದ ದಂಪತಿ ಹೊರಬಂದಿಲ್ಲ.ಟೀ ಅಂಗಡಿಯನ್ನೂ ಸಹ ಓಪನ್ ಮಾಡಿರಲಿಲ್ಲ.ನಿನ್ನೆ ರಾತ್ರಿ ಮಗಳು ಫೋನ್ ಮಾಡಿದಾಗ ತಂದೆ ತಾಯಿ ಕರೆ ಸ್ವೀಕರಿಸಿಲ್ಲ.ಅನುಮಾನ ಬಂದ ತನುಶ್ರೀ ತಮ್ಮ ಸಂಭಂಧಿಕರಿಗೆ ವಿಚಾರ ಮುಟ್ಟಿಸಿದ್ದಾರೆ.
ನಂತರ ಮನೆಗೆ ಬಂದು ಕಿಟಕಿ ತೆರೆದು ನೋಡಿದಾಗ ಯಶೋಧ ರವರ ಮೃತದೇಹ ಮಂಚದ ಮೇಲೆ ಕಂಡುಬಂದಿದೆ.ಪ್ರಕಾಶ್ ರವರ ಮೃತದೇಹ ಬಾಗಿಲ ಬಳಿ ಪತ್ತೆಯಾಗಿದೆ.ದಂಪತಿ ಸಾವಿನ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಹಾಗೂ ಎಡಿಷನಲ್ ಎಸ್ಪಿ ನಂದಿನಿ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೇಲ್ನೋಟಕ್ಕೆ ದಂಪತಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.ಪಿರಿಯಾಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.