ಮೈಸೂರು : ಬರಗಾಲದಲ್ಲಿ ವರವಾಗಿ ಬಂದ ವರುಣನನ್ನ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.
ಗ್ರಾಮದಲ್ಲಿ ಹಬ್ಬದಂತೆ ಆಚರಿಸಿ ಮಳೆರಾಯನನ್ನ ಬರಮಾಡಿಕೊಂಡಿದ್ದಾರೆ.
ತೀವ್ರ ಬರಗಾಲದಲ್ಲಿ ಕೊನೆಗೂ ಕೃಪೆ ತೋರಿದ ಮಳೆರಾಯನಿಗೆ ವಿಶೇಷ ನಮನ ಸಲ್ಲಿಸಿದ್ದಾರೆ.
ನಂಜನಗೂಡು ತಾಲೂಕಿನ ಈಶ್ವರ ಗೌಡನಹಳ್ಳಿ ಗ್ರಾಮದಲ್ಲಿ ಮಳೆ ಹಬ್ಬವನ್ನ ಸಡಗರದಿಂದ ಆಚರಿಸಲಾಗಿದೆ.ಮಳೆ ಹಿನ್ನಲೆ ಶ್ರೀ ಕಾಡುಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅನ್ನದಾಸೋಹ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಜನ-ಜಾನುವಾರುಗಳಿಗೆ ವರುಣ ನೆಮ್ಮದಿ ತಂದಿದ್ದಾನೆ.
ಸಂಕಷ್ಟದಲ್ಲಿದ್ದ ರೈತರಿಗೆ ವರವಾಗಿ ಬಂದ ವರುಣನ ಅಬ್ಬರಕ್ಕೆ ಗ್ರಾಮಸ್ಥರು ಖುಷಿಯಾಗಿದ್ದು ಮತ್ತು ಕೃಷಿ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ. ಈಶ್ವರಗೌಡನಹಳ್ಳಿ, ಬೀರಿಹುಂಡಿ, ಕೊಟ್ಟರಾಯನ ಹುಂಡಿ ಸೇರಿದಂತೆ ಸುತ್ತಮುತ್ತಲಿನ 10 ಗ್ರಾಮದ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಿ ಸಂಭ್ರಮವನ್ನ ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ…