ಮೈಸೂರು : ರಸ್ತೆ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಮೈಸೂರು – ನಂಜನಗೂಡು ರಸ್ತೆಯ ರಿಂಗ್ ರೋಡ್ ಜಂಕ್ಷನ್ ಬಳಿ ರಸ್ತೆ ತಡೆದು ರೈತರ ಪ್ರತಿಭಟನೆ
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆ.
ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಒಂದೂವರೆ ಸಾವಿರ ಹೆಕ್ಟೇರ್ ಬಾಳೆ ನಷ್ಟವಾಗಿದೆ.ಬರಗಾಲದಿಂದ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಕೇಂದ್ರ ತೆಗೆಯಬೇಕು.ಯಾವುದೇ ಷರತ್ತಿಲ್ಲದೆ ಮೇವು ಪೂರೈಕೆ ಮಾಡಬೇಕು.ಗೋ ಶಾಲೆಗಳನ್ನು ತೆಗೆಯಬೇಕು
ಕಬ್ಬಿನ ಬಾಕಿ ಹಣ ನೀಡಬೇಕು.ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 10 ರೂಪಾಯಿಯನ್ನು ಸರ್ಕಾರ ಘೋಷಣೆ ಮಾಡಬೇಕು ಪ್ರತಿಭಟನೆಯಲ್ಲಿ ರೈತರ ಆಗ್ರಹ.