ಮೈಸೂರು: ‘ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಹೊಂದಿರುವ ಏಕೈಕ ಪರಮೋಚ್ಚ ಅಧಿಕಾರ ಎಂದರೆ ಅದು ಮತದಾನ. ನಿರ್ಭೀತಿಯಿಂದ ಯೋಗ್ಯ ವ್ಯಕ್ತಿಗೆ ಮತ ನೀಡುವ ಮೂಲಕ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಬೇಕಾಗಿರುವುದು ಎಲ್ಲರ ಕರ್ತವ್ಯ’ ಎಂದು ಸಮಾಜ ಸೇವಕರಾದ ಆರ್ ಪರಮೇಶ್ ಹೇಳಿದರು.
ನಗರದ ರೈಲ್ವೆ ನಿಲ್ದಾಣ ಮುಂಭಾಗ ವೀರ ಸಾವರ್ಕರ್ ಯುವ ಬಳಗದ ವತಿಯಿಂದ
ಪ್ರಯಾಣಿಕರಿಗೆ ಕಡ್ಡಾಯ ಮತದಾನದ ಜಾಗೃತಿಯ ಕರಪತ್ರ ನೀಡಿ ಮತದಾನ ಜಾಗೃತಿ ಬಗ್ಗೆ ಅರಿವು ಮೂಡಿಸಿ ಅವರು ಮಾತನಾಡಿದರು.
ಸಮಾಜ ಸೇವಕರಾದ ಆರ್ ಪರಮೇಶ್ ಮಾತನಾಡಿ, ‘ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರು ಮತದಾನ ಮಾಡಬೇಕು. ವಿದ್ಯಾವಂತರೇ ಇಂದು ಮತದಾನದಿಂದ ದೂರ ಉಳಿಯುವುದು ಖೇದಕರ’ ಎಂದರು.
ಇದೇ ಸಂದರ್ಭದಲ್ಲಿ ವೀರ ಸಾವರ್ಕರ್ ಯುವ ಬಳಗದ ಉಪಾಧ್ಯಕ್ಷರಾದ ಸಂದೇಶ್, ಸಂಚಾಲಕರಾದ ಆರ್ ಪರಮೇಶ್, ಪ್ರಮೋದ್ ಗೌಡ, ಮಧು ಸೋಮಶೇಖರ್, ಸುರೇಂದ್ರ, ಚಂದನ್ ಗೌಡ, ಯೋಗೇಶ್, ಸಚಿನ್, ಹಾಗೂ ಇನ್ನಿತರರು ಬಳಗದ ಸದಸ್ಯರು ಹಾಜರಿದ್ದರು