ಮೈಸೂರು ಕೊಡಗು ಲೋಕಸಭಾ ಚುನಾವಣೆ -2024ರ ಸಂಬಂಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆ ಆರ್ ನಗರ ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಸಮಯದಲ್ಲಿ ಗುಂಗ್ರಾಲ್ ಛತ್ರದ ಗ್ರಾಮದ ಹತ್ತಿರ ಎಫ್ ಎಸ್ ಟಿ ಉಮೇಶ್ ಹಾಗೂ ತಂಡದವರಿಂದ ಮೈಸೂರಿಗೆ ತೆರಳುತ್ತಿದ್ದ ಶ್ರೀ ಮನ್ಸೂರ್ ಶರೀಫ್ ರವರಿಂದ ಯಾವುದೇ ದಾಖಲಾತಿಗಳಿಲ್ಲದ 5,00,000 ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಲಾಗಿದ್ದು ಸದರಿ ಹಣವನ್ನು ಸಹಾಯಕ ಚುನಾವಣಾ ಅಧಿಕಾರಿಗಳಾದ ಶ್ರೀ ನಂದೀಶ್ ಮತ್ತು ತಹಸೀಲ್ದಾರ್ ಶ್ರೀ ಮಹೇಶ್ ಕುಮಾರ್ ಅವರ ನಿರ್ದೇಶನದಂತೆ ಜಪ್ತಿ ತಂಡದ ನೋಡಲ್ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ಹಾಗೂ ತಂಡದ ಗುರು ಚೇತನ್, ಸತೀಶ್ ಪಾಲ್ ಮತ್ತು ಮಹೇಶ್ ಇವರಿಂದ ದಿನಾಂಕ 22-4-2024ರಂದು ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಯಿತು.