ಮೈಸೂರು : ತಿ.ನರಸೀಪುರ ತಾಲೂಕಿನ ಕರುಹಟ್ಟಿ ಗ್ರಾಮದ ಲಿಂಗಾಯತ ಮುಖಂಡರು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್.ಸಿ ಮಹದೇವಪ್ಪ ಅವರಿಗೆ ಬೆಂಬಲ ಕೊಟ್ಟು ಗೆಲ್ಲಿಸಿದ್ದೇವು. ಆದರೆ ಒಂದು ವರ್ಷದಿಂದ ಸಚಿವ ಮಹದೇವಪ್ಪ ಒಂದು ಬಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜನರ ಕುಂದು ಕೊರತೆಯನ್ನು ವಿಚಾರಿಸಿಲ್ಲ. ಗ್ರಾಮದಲ್ಲಿ ಲಿಂಗಾಯತ ಸಮಾಜಕ್ಕೆ ಸ್ಮಶಾನವಿಲ್ಲ ನಾನು ಗೆದ್ದ ಆರು ತಿಂಗಳಲ್ಲಿ ಎಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಈಗ ಸಚಿವರ ಪತ್ತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹದೇವಪ್ಪರಿಗೆ ಒಂದು ಚಾಳಿ ಇದೇ ಮತ ಕೇಳಲು ಮಾತ್ರ ಊರು ಊರಿಗೆ ಹೋಗುತ್ತಾರೆ. ಗೆದ್ದ ಮೇಲೆ ಅವರನ್ನು ಹುಡುಕಿಕೊಂಡು ನಾವೇ ಮೈಸೂರು ಬೆಂಗಳೂರಿಗೆ ಹೋಗಬೇಕು ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಸಚಿವರ ಪುತ್ರ ಸುನೀಲ್ ಬೋಸ್ ಕೂಡ ಗ್ರಾಮಕ್ಕೆ ಬೇಕಾಗಿರುವ ಕೆಲಸವನ್ನು ನಾನೇ ಮಾಡಿಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಒಂದು ವರ್ಷ ಕಳೆದರೂ ಒಂದೇ ಒಂದು ಕೆಲಸವನ್ನು ಗ್ರಾಮಕ್ಕೆ ಮಾಡಿಕೊಟ್ಟಿಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಹಣವಿಲ್ಲ ಎನ್ನುವುದಾದರೆ ಅಭಿವೃದ್ದಿಗೆ ಹಣ ಎಲ್ಲಿಂದ ತರುತ್ತಾರೆ? ಹಾಗಾಗಿ ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗಬೇಕು. ಹಾಗಾಗಿ ಈ ಬಾರಿ ಎಸ್.ಬಾಲರಾಜ್ ಬೆಂಬಲಿಸುವ ಮೂಲಕ ಮೋದಿ ಕೈ ಬಲ ಪಡಿಸುತ್ತೇವೆ ಎಂದು ಹೇಳಿದರು.