ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಧುವೀರ್ ಒಡೆಯರ್ ರವರು ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಮತ ಪ್ರಚಾರ ನೆಡೆಸಿದರು.
ಈ ವೇಳೆ ಜಟ್ಟಿಹುಂಡಿ ಗ್ರಾಮದಲ್ಲಿ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷದಲ್ಲಿ ಮೈಸೂರು ಕೊಡಗು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ , ಜಲಜೀವನ್ ಮಿಷನ್ ಮೂಲಕ ಎರಡುವರೆ ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ , ಪ್ರಾದಾನ ಮಂತ್ರಿ ಅವಾಜ್ ಯೋಜನೆಯ ಮೂಲಕ ಆಶ್ರಯ ಮನೆಗಳು, 41 ಜನ ಔಷದಿ ಕೆಂದ್ರದ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಔಷದಿ ಪೂರೈಕೆ ,ವಂದೇಭಾರತ್ ರೈಲುಗಳ ದೇಶದ ವಿವಿದೆಡೆಗೆ ಸಂಪರ್ಕ, ಹೀಗೆ ಹಲವಾರು ಯೋಜನೆಗಳನ್ನು ಮೈಸೂರು ಕೊಡಗು ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದರೊಂದಿಗೆ ಬರುವ ಚುನಾವಣೆಯಲ್ಲಿ ಮತ್ತೆ ನಾವು ಮೋದಿಯವರ ಕೈ ಬಲಪಡಿಸಬೇಕಿದೆ ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು
ನಮ್ಮ ಪೂರ್ವಜರಂತೆ ಜನರ ನಡುಗೆ ಇದ್ದು ಕೆಲಸ ಮಾಡುತ್ತೇನೆ
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿ ಯಧುವೀರ್ ರವರ ವಿರುದ್ದ ಮಹರಾಜರಾಗಿ ಅರಮನೆಯೊಗಳೆ ಇರುವವರು ಜನರ ಮಧ್ಯೆ ಬಂದು ಸಮಸ್ಯೆ ಬಗೆಹರಿಸುತ್ತಾರಾ ಜನಸಾಮಾನ್ಯರು ಅವರನ್ನು ಭೇಟಿ ಮಾಡಲು ಆಗುತ್ತಾ ಎಂಬ ಅಪಪ್ರಚಾರ ನೆಡೆಸುತ್ತಿದ್ದು ಈಎಲ್ಲಾ ಅಪಪ್ರಚಾರಗಳಿಗೂ ಯಧುವೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಪೂರ್ವಜರು ಅರಮನೆಯಲ್ಲಿ ಹುಟ್ಟಿದ್ದರೂ ಜನ ಸಾಮನ್ಯರ ನಡುವೆ ಇದ್ದು ನೆರವಾಗುತ್ತಿದ್ದರು ನಾವು ಅವರಂತೆ ನಿಮ್ಮ ನಡುವೆ ಇದ್ದು ನಿಮ್ಮ ಸೇವೆ ಮಾಡುತ್ತೇನೆ ನಿಮ್ಮಗಳ ಸೇವೆ ಮಾಡುವುದು ನನ್ನ ಪಾಲಿನ ಸೌಭಾಗ್ಯವೆಂದು ಭಾವಿಸಿದ್ದೇನೆ ಯಾವುದೆ ಅಪಪ್ರಚಾರಗಳಿಗೆ ಕಿವಿಕೊಡದೆ ನನ್ನನ್ನು ಬೆಂಬಲಿಸಿ ಎಂದು ಮತದಾರರಿಗೆ ಆಭಯ ನೀಡಿದರು.
ಈ ವೇಳೆ ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ ದೇವೆಗೌಡ, ಬಿಜೆಪಿ ಯುವ ಮುಖಂಡ ಕವೀಶ್ ಗೌಡ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.