ಮೈಸೂರು : ಶಕ್ತಿ ಇಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಲೋಕ ಸಭೆಗೆ ನಿಲ್ಲಿಸಿದೆ.ಲಕ್ಷ್ಮಣ್ ಅವರನ್ನು ಹರಕೆ ಕುರಿ ಮಾಡಲು ಹೊರಟಿದೆ.ಗ್ಯಾರೆಂಟಿ ಬಿಟ್ಟರೆ ಕಾಂಗ್ರೆಸ್ ಬಳಿ ಬೇರೇನಿಲ್ಲ
ಗ್ಯಾರೆಂಟಿ ಘೋಷಣೆ ಮಾಡುವಾಗ ಅನ್ ಕಂಡೀಷನ್ ಅಂದ್ರು ಉಚಿತ ಬಸ್ ಬಿಟ್ಟರೆ ಮಿಕ್ಕವು ಯಾವುದು ಸರಿಯಾದ ರೀತಿ ಆಗುತ್ತಿಲ್ಲ ಎಂದು ಜೆಡಿಎಸ್ ಮಾಜಿ ಮೇಯರ್ ಲಿಂಗಪ್ಪ ಹೇಳಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಆಗುತ್ತಿಲ್ಲ
ಬೇರೆ ಬೇರೆ ರೀತಿಯಲ್ಲಿ ಹಣ ವಸೂಲಾತಿಗೆ ಕಾಂಗ್ರೆಸ್ ನಿಂತಿದೆ.ನಗರ ಪಾಲಿಕೆಯಲ್ಲಿ 20% ತೆರಿಗೆ ಜಾಸ್ತಿ ಮಾಡಿದ್ದಾರೆ.ಸಾಮಾನ್ಯ ಜನರಿಗೆ ಸರ್ಕಾರ ಬರೆ ಹಾಕಿದೆ
ಕೇಂದ್ರ ಸರ್ಕಾರದ ಅಕ್ಕಿ ಕೊಟ್ಟು ನಮ್ದು ಅಂತಿದ್ದಾರೆ
ರಾಜ್ಯ ಸರ್ಕಾರದಿಂದ ಅಕ್ಕಿ ಬದಲು ದುಡ್ಡು ಕೊಡ್ತೀವಿ ಅಂದ್ರು ಕೆಲವರಿಗೆ ಬರ್ತಿದೆ ಇನ್ನೂ ಕೆಲವರಿಗೆ ಇಲ್ಲ
ಎಂದು ತಿಳಿಸಿದರು.
ಯದುವೀರ್ ಒಡೆಯರ್ ಬಿಜೆಪಿ ಯಿಂದ ಉತ್ತಮ ವ್ಯಕ್ತಿಯಾಗಿ ಲೋಕ ಸಭೆಗೆ ನಿಂತಿದ್ದಾರೆ.ಮಹಾರಾಜರು ಗೆದ್ದರೆ ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಮಾಡುತ್ತಾರೆ
ರಾಜರು ಯಾರ ಹತ್ತಿರವೂ ಕೈ ಒಡ್ಡಲು ಹೋಗುವುದಿಲ್ಲ
ಹಾಗಾಗಿ ಮೈಸೂರು ಕೊಡಗು ಜನ ಮಹಾರಾಜರಿಗೆ ಮತ ನೀಡಿ ಗೆಲ್ಲಿಸಬೇಕು. ವಿಶ್ವದಲ್ಲೇ ಉತ್ತಮ ಆಡಳಿತ ಮಾಡುತ್ತಿರುವ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮೈತ್ರಿ ಅಭ್ಯರ್ಥಿ ಯದುವೀರ್ ಅವರನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.