ಮೈಸೂರು : ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಲಾರಿಯೊಂದು ಬಸ್ ತಂಗುದಾಣವನ್ನ ಆವರಿಸಿಕೊಂಡು ಬಸ್ ಗಾಗಿ ಕಾದುನಿಂತ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆ ಸಮೀಪವಿರುವ ಬಸ್ ತಂಗುದಾಣದ ಬಳಿ ಈ ದೃಶ್ಯ ಕಂಡು ಬಂದಿದೆ.ಬಸ್ ಪ್ರಯಾಣಿಕರು ಬಸ್ ಗಾಗಿ ಕಾಯುವ ಉದ್ದೇಶದಿಂದ ವಿವಿ ಪುರಂ ಸಂಚಾರಿ ಠಾಣೆ ಸಮೀಪ ಮೈಸೂರು ಮಹಾನಗರ ಪಾಲಿಕೆ ತಂಗುದಾಣ ನಿರ್ಮಿಸಿದೆ.ಆದರೆ ಈ ಬಸ್ ತಂಗುದಾಣವನ್ನ ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಲಾರಿ ಮುಚ್ಚಿಹಾಕಿದೆ.
ಬಸ್ ಗಾಗಿ ತಂಗುದಾಣದಲ್ಲಿ ಇರಬೇಕಿದ್ದ ಪ್ರಯಾಣಿಕರು ಲಾರಿ ಅಡ್ಡನಿಂತ ಪರಿಣಾಮ ರಸ್ತೆ ಮೇಲೆ ಬಂದು ನಿಂತಿದ್ದಾರೆ.ಅಪಘಾತಕ್ಕೆ ಸಿಲುಕಿ ಪೊಲೀಸರ ವಶದಲ್ಲಿರುವ ವಾಹನಗಳನ್ನ ಪಾರ್ಕಿಂಗ್ ಮಾಡಲು ಠಾಣೆಯ ಹಿಂಭಾಗ ಸ್ಥಳ ಮೀಸಲಿದೆ.ಹೀಗಿದ್ದೂ ಅಪಘಾತಕ್ಕೆ ಸಿಲುಕಿ ಹಾನಿಯಾದ ಲಾರಿ ತಂಗುದಾಣದ ಮುಂಭಾಗ ನಿಲ್ಲಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ.ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗುವ ವಾಹನಗಳನ್ನ ಧಿಢೀರ್ ಪ್ರತ್ಯಕ್ಷವಾಗಿ ಲಾಕ್ ಮಾಡಿ ದಂಡ ವಸೂಲಿ ಮಾಡುವ ಸಂಚಾರಿ ಪೊಲೀಸರಿಗೆ ಈ ಲಾರಿ ಉಂಟು ಮಾಡುತ್ತಿರುವ ಕಿರಿಕಿರಿ ಕಾಣಿಸುತ್ತಿಲ್ಲವೇ…?ಕೂಡಲೇ ಸಂಚಾರಿ ಪೊಲೀಸರು ಎಚ್ಚೆತ್ತು ಲಾರಿಯನ್ನ ತೆರುವುಗೊಳಿಸಿ ಬಸ್ ತಂಗುದಾಣಕ್ಕೆ ಮುಕ್ತಿ ನೀಡುವರೇ…?