ಮೈಸೂರು : ಪರಪುರುಷನೊಂದಿಗೆ ಅನೈತಿಕ ಸಂಬಂಧ ಶಂಕೆ. ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ.
ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಪತ್ನಿ ಸುಮಾ ಕೆ.ಆರ್.ಆಸ್ಪತ್ರೆಗೆ ದಾಖಲು.
ಪತಿರಾಯ ಕೃಷ್ಣ ಎಸ್ಕೇಪ್.
ಪ್ರೀತಿಸಿ ಮದುವೆ ಆಗಿದ್ದ ಸುಮ ಕೃಷ್ಣ. ಎರಡು ಮಕ್ಕಳಿದ್ದ ಕುಟುಂಬ.ಕುಡಿತಕ್ಕೆ ದಾಸನಾಗಿದ್ದ ಕೃಷ್ಣ. ಪತ್ನಿ ಮೇಲೆ ಅನುಮಾನ.ಇದೇ ವಿಚಾರದಲ್ಲಿ ಕಳೆದ ವರ್ಷ ಗಲಾಟೆ ಮಾಡಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಜೈಲು ಶಿಕ್ಷೆ ಅನುಭವಿಸಿದ್ದ.ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೃಷ್ಣ.ಪತಿಯ ವರ್ತನೆಗೆ ಬೇಸತ್ತ ಸುಮಾ ತವರು ಮನೆ ಸೇರಿದ್ದರು.ಆಗಾಗ ಬಂದು ತನ್ನ ಜೊತೆ ಮನೆಗೆ ಬರುವಂತೆ ಪೀಡಿಸುತ್ತಿದ್ದ.ಜೀವನೋಪಾಯಕ್ಕಾಗಿ ಸುಮಾ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಸುಮಾರನ್ನ ಕರೆದೊಯ್ದು ಚಾಕುವಿನಿಂದ ಕುತ್ತಿಗೆ, ತಲೆ ಭಾಗ ಕೊಯ್ದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದಾನೆ.
ತೀವ್ರ ಗಾಯಗೊಂಡ ಸುಮಾರನ್ನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕೃಷ್ಣನಿಂದ ಮಗಳ ರಕ್ಷಣೆ ಬೇಕೆಂದು ಸುಮಾ ತಾಯಿ ಸುನಂದ ಮನವಿ ಮಾಡಿದ್ದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.