ಮೈಸೂರು : ಮೈಸೂರಿಗೆ ಮೋದಿ ಆಗಮನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿಗೆ ಬರುತ್ತಿರುವುದಕ್ಕೆ ನನ್ನದೇನು ಅಭ್ಯಂತರವಿಲ್ಲ.
ಆದರೆ, ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನ ಜನರಿಗೆ ತಿಳಿಸಲಿ ಎಂದು ಹೇಳಿದರು.
ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯಯಿಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ಸಿಎಂ,
ಸಂವಿಧಾನ ಬದಲಾಯಿಸುತ್ತೇನೆಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದ್ರು ಹೆಗ್ಡೆ ಮೇಲೆ ಯಾವ ಕ್ರಮ ಕೈಗೊಂಡ್ರಿ.? ಅವತ್ತು ಹೆಗ್ಡೆ ಕೇಂದ್ರ ಸಚಿವರಾಗಿದ್ರು.
ಅವತ್ತೇ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಹೆಗ್ಡೆ ಉತ್ತರ ಕನ್ನಡದಲ್ಲಿ ಏನು ಕೆಲಸ ಮಾಡಿರಲಿಲ್ಲ. 5 ವರ್ಷ ಮನೆಯಲ್ಲೇ ಕುಳಿತಿದ್ದ. ಚುನಾವಣೆ ಸಮಯದಲ್ಲಿ ಹೊರಗೆ ಬಂದಿದ್ದ. ಅವನು ಸೋಲುವುದು ಗೊತ್ತಿದ್ದು ಹೀಗಾಗಿ ಅವನಿಗೆ ಟಿಕೆಟ್ ಕೊಟ್ಟಿಲ್ಲ ಅಷ್ಟೇ ಎಂದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ವಿಚಾರ
ಆರೋಪಿ ಸೆರೆ ಹಿಡಿದಿದ್ದಕ್ಕೆ ಎನ್‌ಐಎ ಹಾಗೂ ರಾಜ್ಯ ಪೊಲೀಸ್‌ಗೆ ಧನ್ಯವಾದ. ಆರೋಪಿಗಳನ್ನು ಕೊಲ್ಕತ್ತಾದಿಂದ ರಾಜ್ಯಕ್ಕೆ ಕರೆತರಲಾಗುತ್ತಿದೆ
ಉಳಿದ ವಿಚಾರಗಳು ತನಿಕೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ದೇಶದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವ ವಿಚಾರ.
ದೇಶದಲ್ಲಿ ಎನ್ ಡಿ ಎ ಬಹುಮತ ಬರಲು ಸಾಧ್ಯವಿಲ್ಲ.
ಐಎನ್‌ಡಿಐಎ ಒಕ್ಕೂಟಕ್ಕೆ ಬಹುಮತ ಸಿಗುವ ನಿರೀಕ್ಷೆ ಇದೆ.
ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ ಎಂದರು.