ಮೈಸೂರು ಕೊಡಗು ಲೋಕಸಭಾ ಚುನಾವಣೆ 2024 ರ ಸಂಬಂಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಸಬಾ ಹೋಬಳಿ ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ 5.5 ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ.
ಎಸ್ ಎಸ್ ಟಿ ಅಧಿಕಾರಿ ಶಿವಕುಮಾರ್ ಹಾಗೂ ತಂಡದವರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ಗೆ ತೆರಳುತ್ತಿದ್ದ ಮೊಹಮ್ಮದ್ ಜಾಸೀನ್ ರವರಿಂದ ಯಾವುದೇ ದಾಖಲಾತಿಗಳಿಲ್ಲದ 5,50,000 ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದ ವೇಳೆ ಜಪ್ತಿ ಮಾಡಲಾಗಿದೆ. ಸದರಿ ಹಣವನ್ನು ಸಹಾಯಕ ಚುನಾವಣಾ ಅಧಿಕಾರಿಗಳಾದ ನಂದೀಶ್ ಮತ್ತು ತಹಸೀಲ್ದಾರ್ ಶ್ರೀ ಮಹೇಶ್ ಕುಮಾರ್ ಅವರ ನಿರ್ದೇಶನದಂತೆ ಜಪ್ತಿ ತಂಡದ ನೋಡಲ್ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ಹಾಗೂ ತಂಡದ ಗುರು ಚೇತನ್, ಸತೀಶ್ ಪಾಲ್ ಮತ್ತು ಮಹೇಶ್ ರವರು ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಗೆ ರವಾನಿಸಿದ್ದಾರೆ.