ಮೈಸೂರು : ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಸುದ್ದಿ ಗೋಷ್ಠಿ ಕೇಂದ್ರದ ಕಾಂಗ್ರೆಸ್ ನ ಗ್ಯಾರಂಟಿ ಪೋಸ್ಟರ್ ಬಿಡುಗಡೆ ಮಾಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಮ್ಮುಖದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು,
ಪಂಚ ನ್ಯಾಯದಡಿ ಕಾಂಗ್ರೆಸ್ ಭರವಸೆಗಳ ಕುರಿತು ಮಾಹಿತಿ ನೀಡಿದ ಪುಷ್ಪಾ ಅಮರನಾಥ್.
ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಗ್ಯಾರಂಟಿ ಬೇಕಾಗಿದೆ. ಕಳೆದ ವರ್ಷ ರಾಜ್ಯ ಸರ್ಕಾರದ ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನ ಜಾರಿ ಮಾಡಿ ನುಡಿದಂತೆ ನಡೆದಿದೆ. ಗ್ಯಾರಂಟಿ ಪಕ್ಷ ಅಂದರೆ ಅದು ನಮ್ಮ ಕಾಂಗ್ರೆಸ್.ಐದು ನ್ಯಾಯದಡಿ 25 ಗ್ಯಾರಂಟಿಗಳನ್ನು ನಮ್ಮ ರಾಷ್ಟ್ರೀಯ ನಾಯಕರು ಕೊಟ್ಟಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೂ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಹಿ ಇರುವ ಗ್ಯಾರಂಟಿಗಳನ್ನ ಮುಂದಿಟ್ಟು ಮತಕೇಳುತ್ತಿದ್ದೇವೆ.
ಮಹಿಳೆಯರು, ರೈತರು,ಶ್ರಮಿಕರು ಪಂಚ ನ್ಯಾಯದಡಿ ದೇಶದ ಎಲ್ಲಾ ವರ್ಗದ ಜನರಿಗೆ ನಮ್ಮ ಪಕ್ಷ ಗ್ಯಾರಂಟಿ ಕೊಡುತ್ತಿದ್ದೇವೆ. ಕರ್ನಾಟಕ ಮಾದರಿಯನ್ನು ದೇಶದ ಇತರೆ ರಾಜ್ಯಗಳಲ್ಲೂ ಜಾರಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ಬಿಜೆಪಿಯವರು ನಮ್ಮ ಗ್ಯಾರಂಟಿಯನ್ನ ಕಾಪಿ ಮಾಡುತ್ತಿದ್ದಾರೆ ಎಂದು ಹೇಳಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ರಿ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಎಲ್ಲಿ ಕೊಟ್ಟಿದ್ದೀರಿ ಹೇಳಿ. 15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂದರು ಎಲ್ಲಿ ಬಂತು ಹೇಳಿ.?
ಇಂದು ಬೆಲ್ಲದ ಗ್ಯಾರಂಟಿಗಳನ್ನ ನಮ್ಮ ಸರ್ಕಾರ ಕೊಟ್ಟಿದೆ.
ಬೇವಿನ ಗ್ಯಾರಂಟಿಯನ್ನ ಬಿಜೆಪಿ ಕೊಟ್ಟಿದೆ.
ಹಾಗಾಗಿ ಕಾಂಗ್ರೆಸ್ ಗೆ ಎಲ್ಲರು ಮತ ನೀಡಬೇಕಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಮೈಸೂರು ನಗರ ಘಟಕದ ಅಧ್ಯಕ್ಷ ಆರ್ ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್,ಪುಷ್ಪಾಲತ ಚಿಕ್ಕಣ್ಣ,ಮತ್ತು ಮೋದಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.