ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಎಂ ಲಕ್ಷ್ಮಣ ರವರು ಇಂದು ತಿಲಕ್ ನಗರ ವಾರ್ಡ್ ನಂಬರ್ 25, ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ,ಈದ್ ಉಲ್ ಫಿತ್ರು, ಮುಸಲ್ಮಾನ್ ಸಮುದಾಯದವರ ಪ್ರಾರ್ಥನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದರು.
ಪ್ರಾರ್ಥನೆ ಸಂದರ್ಭದಲ್ಲಿ ಮುಸ್ಲಿಂ ಭಾಂದವರ ಜೊತೆ ಸೇರಿ ಪ್ರಾರ್ಥನೆ ಮಾಡಿ. ಎಲ್ಲರೊಟ್ಟಿಗೆ ಸೇರಿ ಭರ್ಜರಿ ಮತಯಾಚನೆ ಮಾಡಿದ್ದರು. ಎಲ್ಲರ ಬಳಿ ಕೈ ಮುಗಿದು ಮತಯಾಚನೆ ಮಾಡಿ. ಅವರೊಟ್ಟಿಗೆ ಕುಳಿತು ಸ್ವಲ್ಪ ಕಾಲ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರ. ಮುಸ್ಲಿಂ ಮುಖಂಡರು ಲಕ್ಷ್ಮಣ ರವರಿಗೆ ಬೆಂಬಲ ಸೂಚಿಸಿದ್ದರು. ಪ್ರಾರ್ಥನೆ ಮುಗಿದ ಬಳಿಕ ಲಕ್ಷ್ಮಣ ರವರ ಬಳಿ ಪೋಟೋ ತೆಗೆಸಿಗೊಂಡು ಸಿಹಿ ತಿನಿಸಿ ಬೆಂಬಲ ಕೋರಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್ ಒಂದು ತಿಂಗಳು ಕಾಲ ಉಪವಾಸ ಮಾಡಿ ರಂಜಾನ್ ಹಬ್ಬ ಮಾಡುತ್ತಿದ್ದೀರಾ. ಎಲ್ಲರಿಗೂ ಹಬ್ಬದ ಶುಭಾಶಯಗಳು ಭಾರತದಲ್ಲಿರುವ ಎಲ್ಲರೂ ಒಂದೇ ಎಲ್ಲರಲ್ಲೂ ಸಮಾನ ಭ್ರಾತೃತ್ವ ಭಾವನೆ ಇರಬೇಕು. ಹಿಂದೂ ಮತ್ತು ಮುಸ್ಲಿಮರು ಸೇರಿ ಒಟ್ಟಾಗಿ ಹಬ್ಬವನ್ನು ಆಚರಣೆ ಮಾಡೋಣ.
ಎಲ್ಲಾ ಧರ್ಮದವರು ಒಂದಾಗಿ ಅಣ್ಣ ತಮ್ಮಂದಿರ ತರ ಸಮಾಜದಲ್ಲಿ ಬದುಕ ಬೇಕು. ಎ ಸಮಾಜ ದಲ್ಲಿ ಶಾಂತಿಯಿಂದ ಬಾಳ ಬೇಕು ಎಂದು ಹೇಳಿ 26 ರಂದು ತಪ್ಪದೆ ಮತ ನೀಡಬೇಕೆಂದು ಪ್ರಾರ್ಥನೆ ಮಾಡಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ಸರ್ ಖಾಜಿ ಹಜರತ್ ಮೌಲಾನಾ ಅಲ್ ಹಾಜ್ ಮೊಹಮದ್ ಉಸ್ಮಾನ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.