ಆದಿಚುಂಚನಗಿರಿ ಮಠಕ್ಕೆ ಬಿಜೆಪಿ ಜೆಡಿಎಸ್ ನಾಯಕರು ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಒಕ್ಕಲಿಗ ಸಿಎಂ ಕೆಳಗಿಳಿಸಿದ್ದು ಬಿಜೆಪಿ. ಇದನ್ನ ಸ್ವಾಮೀಜಿಗಳು ಕೇಳಬೇಕಿತ್ತು ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ.
ಇಂತಹ ಹೇಳಿಕೆ ಕೊಡೋದ್ರಲ್ಲಿ ಡಿಕೆ ಶಿವಕುಮಾರ್ ಪ್ರವೀಣರು. ನಾವೆಲ್ಲರೂ ಒಕ್ಕಲಿಗರು ಸೇರಿ ಎಲ್ಲಾ ಸಮುದಾಯ ಒಗ್ಗಟ್ಟಿನಿಂದ ಇದ್ದೇವೆ. ಎಲ್ಲದಕ್ಕೂ ಡಿಕೆ ಶಿವಕುಮಾರ್ ಅವರೇ ಉತ್ತರ ಕೊಡುತ್ತಿದ್ದಾರೆ. ಈ ವಿಚಾರದಲ್ಲಿ ಸ್ವಾಮೀಜಿಗಳನ್ನ ಕೇಳೋದು ಏನಿದೆ ಎಂದು ಹೇಳಿದರು.
HAL ಮುಚ್ಚುತ್ತಾರೆ ಎಂದು ರಾಹುಲ್ ಗಾಂಧಿ ಅಪಪ್ರಚಾರ ಮಾಡಿದ್ರು. ಆದರೆ ಹೆಚ್ HAL ಗೆ ಆದಾಯ ಬರುತ್ತಿದೆ. ಅಪಪ್ರಚಾರ ಮಾಡಿದ ರಾಹುಲ್ ಗಾಂಧಿ ಕ್ಷಮೆ ಕೇಳ್ತಾರಾ..? ಡಿಕೆ ಶಿವಕುಮಾರ್ ಕ್ಷಮೆ ಕೇಳಿಸ್ತಾರಾ ಎಂದು ಪ್ರಶ್ನೆ ಮಾಡಿದರು.ರಾಜಕೀಯಕ್ಕೆ ಸುಖ ಸುಮ್ಮನೆ ಸ್ವಾಮೀಜಿ ಅವರನ್ನು ಎಳೆದು ತರುವುದು ಸೂಕ್ತವಲ್ಲ ಎಂದು ಎಚ್ಚರಿಸಿದರು.