ಮೈಸೂರು : ಜಾನುವಾರುಗಳಿಗಾಗಿ ಸಂಗ್ರಹವಾಗಿದ್ದ ನೀರನ್ನ ಅಡಿಕೆ ತೋಟಕ್ಕೆ ಅಕ್ರಮವಾಗಿ ಬಳಸುತ್ತಿದ್ದ ಮಹಿಳೆಯರನ್ನ ಪ್ರಶ್ನಿಸಿದ ನೀರುಗಂಟಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಗ್ಗಂದೂರು ಗ್ರಾಮಪಂಚಾಯ್ತಿಯ ವಾಟರ್ ಮನ್ ಚೆಲುವರಾಜು ಎಂಬುವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.ಚಂದ್ರಯ್ಯ,ರಾಜಮ್ಮ ಹಾಗೂ ಶಿಲ್ಪ ಎಂಬುವರ ಮೇಲೆ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೇಸಿಗೆ ಹಿನ್ನಲೆ ಜಾನುವಾರುಗಳಿಗೆ ಕುಡಿಯುವ ಉದ್ದೇಶದಿಂದ ನಿರ್ಮಿಸಲಾದ ತೊಟ್ಟಿಯಲ್ಲಿ ನೀರನ್ನ ಸಂಗ್ರಹಿಸಲಾಗಿತ್ತು.ಪಕ್ಕದಲ್ಲೇ ಅಡಿಕೆ ತೋಟ ಹೊಂದಿದ್ದ ಚಂದ್ರಯ್ಯ ತೊಟ್ಟಿಯಿಂದ ನೀರನ್ನ ಅಕ್ರಮವಾಗಿ ಬಳಸುತ್ತಿದ್ದ.ಈ ವಿಚಾರ ನೀರುಗಂಟಿ ಚೆಲುವರಾಜು ಗಮನಕ್ಕೆ ಹೋಗಿದ್ದು ಸ್ಥಗಿತಗೊಳಿಸಲು ಯತ್ನಿಸಿದ್ದಾರೆ.ಇದಕ್ಕೆ ಚಂದ್ರಯ್ಯ ಹಾಗೂ ಈತನ ಪತ್ನಿ ರಾಜಮ್ಮ ಮತ್ತು ಮಗಳು ಶಿಲ್ಪ ತೀವ್ರ ವಿರೋಧ ಮಾಡಿದ್ದಾರೆ.ತೋಟಕ್ಕೆ ನೀರು ಹಾಯಿಸುತ್ತಿದ್ದ ದೃಶ್ಯಗಳನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಲು ಚೆಲುವರಾಜು ಮುಂದಾಗಿದ್ದಾರೆ.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜಮ್ಮ,ಶಿಲ್ಪ ರವರು ಚೆಲುವರಾಜ್ ರ ಮೇಲೆ ಹಲ್ಲೆ ಮಾಡಿ ಕಚ್ಚಿಗಾಯಗೊಳಿಸಿದ್ದಾರೆ.ಗಾಯಗೊಂಡಿರುವ ಚೆಲುವರಾಜ್ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಭಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಚೆಲುವರಾಜ್ ದೂರು ದಾಖಲಿಸಿದ್ದಾರೆ.