ಮೈಸೂರು : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ, ಮತದಾರರ ನೋಂದಣಿ ಮತ್ತು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಮೈಸೂರು ಜಿಲ್ಲೆಗೆ ಮಾಜಿ ಭಾರತೀಯ ಕ್ರಿಕೇಟ್ ಆಟಗಾರರಾದ ಜಾವಗಲ್ ಶ್ರೀನಾಥ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್ ಆಟಗಾರರಾದ ಮಹೇಂದ್ರ. ಎಂ ಅವರನ್ನು ಜಿಲ್ಲಾ ಸ್ವೀಪ್ ಐಕಾನ್ಗಳಾಗಿ ಅನುಮೋದಿಸಲಾಗಿದೆ ಎಂದು ಡಿಪಿಎಆರ್(ಚುನಾವಣೆ) ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಗಳಾದ ಕೂರ್ಮಾ ರಾವ್ ಎಂ ತಿಳಿಸಿದ್ದಾರೆ.