ಮೈಸೂರು : ಪಾಳು ಮನೆಯಲ್ಲಿ ಜಿಂಕೆ ಕಳೆಬರಹ ಪತ್ತೆಯಾಗಿದೆ. ಮಾಂಸಕ್ಕಾಗಿ ಜಿಂಕೆ ಶವ ಬಚ್ಚಿಟ್ಟಿರುವ ಶಂಕೆ
ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಜಿಂಕೆಯ ಕಳೆಬರವನ್ನು ಪಾಳು ಮನೆಯಲ್ಲಿ ಬಚ್ಚಿಟ್ಟಿರುವ ಆರೋಪ
ಹುಣಸೂರು ತಾಲ್ಲೂಕು ಚಿಕ್ಕಹೆಜ್ಜೂರು ಹಾಡಿ ಬಳಿ ಘಟನೆ ನಡೆದಿದೆ.
ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯದಂಚಿನ ಚಿಕ್ಕಹೆಜ್ಜೂರು ಹಾಡಿ-೨
ನೀಲಮ್ಮರಿಗೆ ಸೇರಿದ ಪಾಳು ಮನೆಯಲ್ಲಿ ಸುಮಾರು ಒಂದೂವರೆ ವರ್ಷದ ಗಂಡು ಜಿಂಕೆ ಕಳೆಬರಹ ಪತ್ತೆಯಾಗಿದೆ.ಜಿಂಕೆಯನ್ನು ಬೀದಿನಾಯಿಗಳು ಅಟ್ಟಾಡಿಸಿ ಕೊಂದು ಹಾಕಿದ್ದವು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಬದಲು ಕೆಲವರು ಸೇರಿಕೊಂಡು ಮಾಂಸ ತಿನ್ನುವ ಆಸೆಗಾಗಿ ಜಿಂಕೆ ಕಳೆಬರಹವನ್ನು ಬಚ್ಚಿಟ್ಟಿದ್ದರು
ಜಿಂಕೆ ಮಾಂಸ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ