ಹಿಂದುಳಿದ ಜಾತಿಗಳಲ್ಲಿದ್ದುಕೊಂಡು ಮೀಸಲಾತಿ ಲಾಭ ಪಡೆದವರು ಮೀಸಲು ಕೆಟಗರಿಯಿಂದ ಹೊರಬಂದು ಇನ್ನಷ್ಟು ಹಿಂದುಳಿದ ಜನರಿಗೆ ಮೀಸಲಾತಿಯ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಎಸ್‍ಟಿ ಎಸ್‍ಟಿ ಸಮುದಾಯಕ್ಕೆ ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡುವ ವಿಷಯದ ಕುರಿತು ಪರಿಶೀಲನೆ ನಡೆಸುತ್ತಿರುವ ಸುಪ್ರೀಂನ ಸಂವಿಧಾನ ಪೀಠ ವಿಚಾರಣೆ ವೇಳೆ ಈ ಅಭಿಪ್ರಾಯ ತಿಳಿಸಿದೆ.
ನಿರ್ದಿಷ್ಟ ಸಮುದಾಯದಲ್ಲಿರುವ ಒಳಪಂಗಡಗಳು ಮೀಸಲಾತಿ ಲಾಭ ಪಡೆದು ಮುಂದೆ ಬಂದಿದ್ದರೆ ಅಂತಹವರು ಅದರಿಂದ ಹೊರಬಂದು ಸಾಮಾನ್ಯ ವರ್ಗದವರೊಂದಿಗೆ ಸ್ಪರ್ಧೆ ಮಾಡಬೇಕು. ಇದರಿಂದ ತಮ್ಮದೇ ವರ್ಗದ ಹಿಂದುಳಿದವರಿಗೆ ಅನುಕೂಲವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ