ಮೈಸೂರು : ಸುತ್ತೂರು ಜಾತ್ರಾ ಮಹೋತ್ಸವದ 2ನೇ ದಿನ ಸಾಮೂಹಿಕ ವಿವಾಹ ನೆರವೇರಿದೆ. 120 ಜೋಡಿಗಳು ವೈವಾಹಿಕ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ.
ಸುತ್ತೂರು ಜಾತ್ರೆಯ ಎರಡನೇ ದಿನ ಸಾಮೂಹಿಕ ವಿವಾಹ ಅದ್ದೂರಿಯಾಗಿ ನೆರವೇರಿದೆ.
120 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶ.
ವಿವಿಧ ಮಠಾಧಿಪಿತಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿಕೆ. 120 ಜೋಡಿಗಳ ಪೈಕಿ 4 ವೀರಶೈವ ಲಿಂಗಾಯತ, 61 ಎಸ್ ಸಿ, 26 ಎಸ್ ಟಿ, 18 ಹಿಂದುಳಿದ ವರ್ಗ, 11 ಅಂತರಜಾತಿ ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಬದುಕಿಗೆ ಪ್ರವೇಶ ಮಾಡಿದ್ದಾರೆ.
ತಮಿಳುನಾಡಿನ 23 ಜೋಡಿಗಳು, 4 ವಿಶೇಷ ಚೇತನ ಜೋಡಿಗಳು ಹಾಗು ಒಂದು ಜೋಡಿ ಮರು ಮದುವೆಯಾದದ್ದು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿಶೇಷ ಗಮನ ಸೆಳೆಯಿತು..