ಅವನ್ಯಾರೋ ಚಕ್ರವರ್ತಿ ಸೂಲಿಬೆಲೆ ಅಂತೆ.
ತಲೆಹರಟೆ, ಅವನಿಗೆ ಮಾನ ಮರ್ಯಾದೆ ಇಲ್ಲ.
ಶುಕ್ರವಾರ ನಮಾಜ್‌ಗೆ ಅವಕಾಶ ನೀಡಲು ಪರಿಕ್ಷಾ ವೇಳಾಪಟ್ಟಿ ಬದಲಿಸಿದ್ದಾರೆ ಅಂತ ಟ್ವೀಟ್ ಮಾಡಿದ್ದಾನೆ.
ಇದು ವಿಷ ಬಿತ್ತ ಬೀಜುವ ಕೆಲಸ ಅಲ್ವ.
ಕಾಮನ್ ಸೆನ್ಸ್ ಇಲ್ಲದೆ ಏನೇನೋ ಹೇಳುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ರಾಜ್ಯದ ಜನ ದೂರು ತಳ್ಳುತ್ತಾರೆ. ಅವನ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ.ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.ಪಿಯುಸಿ ಪರೀಕ್ಷೆಗಳು ಇರುವ ಕಾರಣಕ್ಕೆ ಸ್ಥಳ ಸರಿದೂಗಿದಲು ಶುಕ್ರವಾರ ಸಮಯ ಬದಲಾಗಿದೆ.ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದವರು.
ಅವರಿಗೂ ಇದೆಲ್ಲ ಗೊತ್ತಾಗಬೆರಕಿತ್ತು. ಯಾವುದೋ ಮೂಲೆಯಲ್ಲಿ ಕುಳಿತು ಟ್ವಿಟ್ ಮಾಡುವುದು ಸರಿಯಲ್ಲ ಎಂದರು.
ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರುವ ವಿಚಾರ.
ಪ್ರಶ್ನೆ ಕೇಳುತ್ತಿದಂತೆ ಗರಂ ಆದ ಮಧು ಬಂಗಾರಪ್ಪ.
ನಾನು ಆ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ.
ನನ್ನಿಂದ ಯಾವ ಉತ್ತರ ನಿರೀಕ್ಷೆ ಮಾಡಬೇಡಿ.
ಅದೇ ನನ್ನ ಉತ್ತರ.ಬೇರೆ ಯಾರಾದರೂ ಬಗ್ಗೆ ಕೇಳಿ ಹೇಳುತ್ತೇನೆ ಎನ್ನುವ ಮೂಲಕ ಕುಮಾರ್ ಬಂಗಾರಪ್ಪ ಪಕ್ಷ ಸೇರ್ಪಡೆಗೆ ಪರೋಕ್ಷ ವಿರೋಧ ವ್ಯಕ್ತಪಡಿಸಿದರು.