ಚಾಮರಾಜನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಮದುವೆಯಲ್ಲಿ ವಧು-ವರರಾದ ಚೈತ್ರ ಮತ್ತು ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ವಿರಾಟ್ ಶಿವು ರವರು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವಿಡಿದು ಮದುವೆಗೆ ಬಂದಿದ್ದ ಸಂಬಂಧಿಕರು ಹಾಗೂ ಸ್ನೇಹಿತರಿಗೆ ದೇಶದ ಉತ್ತಮ ಭವಿಷ್ಯಕ್ಕಾಗಿ ಮೋದಿಯವರನ್ನ ಬೆಂಬಲಿಸಿ ಎಂದು ಕೇಳಿ ತಾಂಬೂಲ ವಿತರಿಸಿದರು
ದೇಶದ ಭವ್ಯ ಭವಿಷ್ಯಕ್ಕಾಗಿ ನರೇಂದ್ರ ಮೋದಿಯವರಿಗೆ ಮತ ನೀಡುವುದರ ಮೂಲಕ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಿ ಎಂಬ ಸಂದೇಶವನ್ನು ಮದುವೆಗೆ ಬಂದಿದ್ದ ಸಂಬಂಧಿಕರಲ್ಲಿ ಪ್ರಾರ್ಥಿಸಿಕೊಂಡರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಣಯ್, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಮೂಡ್ನಾಕೂಡು ಪ್ರಕಾಶ್, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕರಾದ ಕೆಲ್ಲಂಬಳ್ಳಿ ಆನಂದ್,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೂರ್ಯಕುಮಾರ್,ನಗರ ಘಟಕ ಅಧ್ಯಕ್ಷರಾದ ಆನಂದ್ ಭಗೀರಥ,ಐಟಿ ಮುಖ್ಯಸ್ಥರಾದ ಅಶ್ವಿನ್ ಕುಮಾರ್,ಮಂಗಲ ಚೆಲುವರಾಜ್,ಮಹೇಶ್ ಮಣಿಕಂಠ ಉಪಸ್ಥಿತರಿದ್ದರು….