ಚಾಮರಾಜನಗರ : ಕಾಡಾನೆ ಗುಂಪೊಂದು ತಮಿಳುನಾಡಿಗೆ ಸೇರಿದ ಸರ್ಕಾರಿ ಬಸ್ ನ್ನು ಅಡ್ಡಗಟ್ಟಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿ ನಡೆದಿದೆ.
ತಮಿಳುನಾಡು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ವ್ಯಾಪ್ತಿಯ ಹಾಸನೂರು ಬಳಿಯ ಮಾವಳ್ಳಂ ವಿಭಾಗದ ರಸ್ತೆಯಲ್ಲಿ ತಮಿಳುನಾಡಿನಿಂದ ಬಂದ ಸರ್ಕಾರಿ ಬಸ್ ನ್ನು ಆನೆಯ ಹಿಂಡೊಂದು ಅಡ್ಡಗಟ್ಟಿದ ಪರಿಣಾಂ ಕೆಲಕಾಲ ಬಸ್ ಹಾಗೂ ಇನ್ನಿತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ಆನೆಯ ಹಿಂಡು ರಸ್ತೆ ಮಧ್ಯೆಯಿಂದ ಕಾಡಿನಂಚಿಗೆ ತೆರಳಿದ ಬಳಿಕ ವಾಹನಗಳು ಸುಗಮವಾಗಿ ಸಂಚರಿಸಿತು.