ಮೈಸೂರು : ಕಾರು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯವಾಗಿರುವ ಘಟನೆ
ಮೈಸೂರಿನ ಸರಸ್ವತಿಪುರಂನ ಅಗ್ನಿಶಾಮಕದಳದ ಮುಂದೆ ನಡೆದಿದೆ.
ಏಕಲವ್ಯ ವೃತ್ತದಿಂದ ಅಗ್ನಿಶಾಮಕ ದಳ ಕಚೇರಿಯತ್ತ ಸಾಗುತ್ತಿದ್ದ ಬೈಕ್ ಸವಾರ. ಕಾರು ಚಲಾಯಿಸುತ್ತಿದ್ದ ಮಹಿಳೆ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಗುದ್ದಿದ್ದರಿಂದ ಸಂಭವಿಸಿದ ಅವಘಡ.ಕಾರು ಡಿಕ್ಕಿಯೊಡೆದ ರಭಸಕ್ಕೆ ಬೈಕ್ ಸವಾರನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು. ಬೈಕಿಗೂ ತೀವ್ರ ಹಾನಿ, ಕಾರಿನ ಮುಂಭಾಗ ಜಖಂ.
ಸುದ್ದಿ ತಿಳಿಯುತ್ತಿದ್ದಂತೆ ಸಂಚಾರ ವಿಭಾಗದ ಪೊಲೀಸರು ಘಟನಾ ಸ್ಥಳಕ್ಕೆ ಆಗಮನ. ಅಪಘಾತಕ್ಕೀಡಾಗಿದ್ದ ಎರಡೂ ವಾಹನಗಳನ್ನು ಕೊಂಡೊಯ್ದ ಸಂಚಾರ ವಿಭಾಗದ ಪೊಲೀಸರು.ಈ ಸಂಬಂಧ ಕೆ ಆರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.