ಮೈಸೂರು : ಹುಣಸೂರು ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು ಎಂದು
ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತೊಮ್ಮೆ ಹೇಳಿಕೆ ಕೊಟ್ಟಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿ ನಡೆಸಿ ಮಾತನಾಡಿದ ಅವರು, ದೇವರಾಜ ಅರಸು ಹುಟ್ಟೂರು ಪ್ರತ್ಯೇಕ ಜಿಲ್ಲೆಯಾದ್ರೆ ಸಾಕಷ್ಟು ಅನುಕೂಲಗಳು ಆಗುತ್ತದೆ.
ಮೈಸೂರು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಒತ್ತಡ ಇದೆ.
ತಾಲೂಕು ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ.
ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
6 ತಾಲೂಕುಗಳಿಗೆ ನಾಲ್ಕು ಜನ ಶಾಸಕರಿದ್ದೇವೆ.
ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ.
ಸಿಎಂ ಜೊತೆಯೂ ಸಹ ಮಾತನಾಡುತ್ತೇನೆ ಎಂದರು.
ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ ಕೋಟೆ ರಾಜ್ಯದಲ್ಲೇ ಸಂಪತಭರಿತ ತಾಲೂಕು.ನೂರಾರು ಕೋಟಿ ತಂಬಾಕನಿಂದ ಆಧಾಯ ಬರುವ ತಾಲೂಕುಗಳಿದೆ.
ಆರು ತಾಲೂಕುಗಳನ್ನ ಸೇರಿಸಿ ಒಂದು ಜಿಲ್ಲೆಯಾಗಲಿ.
ನಮ್ಮ ಜಿಲ್ಲೆಯವರೇ ಸಿಎಂ ಆಗಿದ್ದಾರೆ.
ಹೀಗಾಗಿ ದೇವರಾಜ ಅರಸು ಅವರ ಹೆಸರು ಅಮರವಾಗಬೇಕು, ಹುಣಸೂರು ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು ಎಂದು ವಿಶ್ವನಾಥ್ ಹೇಳಿದರು.
ಎಚ್‌ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರುನಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದಾರೆ.ಅವರ ಕಷ್ಟಗಳನ್ನ ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ.ನಾನು ಈ ವಿಚಾರದಲ್ಲಿ ಹೋರಾಟ, ಸಂಘರ್ಷ ಮಾಡುವುದಿಲ್ಲ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎಂದರು

