ಮೈಸೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಮತ್ತು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಸದ ಪ್ರತಾಪ್ ಕಚೇರಿ ಚೆಲೋ ಚಳುವಳಿಗೆ ಅವಕಾಶ ಸಿಗದ ಹಿನ್ನಲೆ
ಸಂಸದ ಕಚೇರಿ ಬಳಿ ಪ್ರತಿಭಟನೆಗೆ ಅವಕಾಶ ಕೊಡದೆ
ಹಳೆ ಡಿಸಿ ಕಚೇರಿ ಬಳಿ ನೂರಾರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ಮುಂಬರುವ ಬಜೆಟ್ ನಲ್ಲಿ ಐಸಿಡಿಎಸ್ ಅನುದಾನ ಹೆಚ್ಚಳ, ಕನಿಷ್ಠ ವೇತನ ಘೋಷಣೆ,ಆಹಾರ,ಆರೋಗ್ಯ ಶಿಕ್ಷಣಕ್ಕಾಗಿ ಇರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್ಎಚ್ಎಂ,ಮುಂತಾದ ಯೋಜನೆಗಳ ಖಾಯಂ ಮಾಡಬೇಕು.ಅಂಗನವಾಡಿ ನೌಕರು,ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ ಕನಿಷ್ಠ 31 ಸಾವಿರ ಕನಿಷ್ಠ ನೀಡಬೇಕು.ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು.ಎಂದು ಹಲವು ಬೇಡಿಕೆಗಳ ಮುಂದಿಟ್ಟು ಪ್ರತಿಭಟನೆ.ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿಗೆ ದಿಕ್ಕಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.