ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ವ್ಯಕ್ತಿಗೆ ಕೋರ್ಟ್ ದಂಡ ವಿಧಿಸಿದೆ. ಬೈಕ್ ಮಾಲೀಕ ಸೆಲ್ವಮ್ ಎಂಬಾತನಿಗೆ 25,200 ರೂಪಾಯಿ ದಂಡ ವಿಧಿಸಿದೆ. 2ನೇ ಸಂಚಾರ ನ್ಯಾಯಾಲಯ ದಂಡ ವಿಧಿಸಿ ಆದೇಶ ಮಾಡಿದೆ. ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಅಪ್ರಾಪ್ತ ಬಾಲಕ. ಬೈಕ್ ಹಾಗೂ ಬಾಲಕನ ಮೇಲೆ ಪ್ರಕರಣ ದಾಖಲಿಸಿದ್ದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು. ನಂತರ ಬಾಲಕನಿಗೆ ಬೈಕ್ ನೀಡಿದ ಸೆಲ್ವಮ್ ಮೇಲೂ ಕೇಸ್ ದಾಖಲಿಸಿದ ಪೊಲೀಸರು. ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ಆರೋಪದ ಮೇಲೆ ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿ, ಬೈಕ್ ಮಾಲೀಕನಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್.
ಬೆಂಗಳೂರಿನಲ್ಲಿ ಇತ್ತೀಚಿಗೆ ಚಿಕ್ಕ ಪ್ರಾಯದ ಹುಡುಗರು ವ್ಹೀಲಿಂಗ್ ಮಾಡುತ್ತಿದ್ದು, ಬಹುತೇಕ ಹುಡುಗರು ಅಪ್ರಾಪ್ತರಾಗಿದ್ದು, ಬೆಂಗಳೂರು ಪೊಲೀಸ್ರು ಸ್ಪೆಷಲ್ ಡ್ರೈವ್ ಮೂಲಕ ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಬಂಧನ ಮಾಡಿ ಮಕ್ಕಳಿಗೆ ಶಿಕ್ಷೆ ಕೊಡುವ ಬದಲು ಬೈಕ್ ಮಾಲೀಕರಿಗೆ ಶಿಕ್ಷೆ ಕೊಡುವ ಕೆಲಸಕ್ಕೆ ಪೊಲೀಸ್ರು ಕೈ ಹಾಕಿದ್ದಾರೆ. ಹೀಗಾಗಿ ಇನ್ಮುಂದೆ ಯಾರೇ ಆದರೂ ಮಕ್ಕಳಿಗೆ ಬೈಕ್ ಕೊಟ್ಟು ಸಿಕ್ಕಿ ಬಿದ್ದರೆ ಪೋಷಕರಿಗೆ ಶಿಕ್ಷೆ ಆಗುವುದು ಖಂಡಿತ. ಈಗಾಗಲೇ ಒಂದು ಕೇಸ್‌ನಲ್ಲಿ 25 ಸಾವಿರ ದಂಡ ವಿಧಿಸಿದ್ದು, ಇನ್ಮುಂದೆ ಬರುವ ಎಲ್ಲಾ ಕೇಸ್‌ಗಳಿಗೂ ಇದೇ ತೀರ್ಪು ಅನ್ವಯ ಆಗುವ ಸಾಧ್ಯತೆ ದಟ್ಟವಾಗಿದೆ. ಪೋಷಕರೇ ಇನ್ಮುಂದೆ ಮಕ್ಕಳಿಗೆ ಬೈಕ್ ಕೊಡುವ ಮುನ್ನ ಬೀ ಕೇರ್‌ಫುಲ್.