ಮೈಸೂರು : ಮೈಸೂರಿನ ಪ್ರಾದೇಶಿಕ ಆಯುಕ್ತರ ಚಾಮುಂಡೇಶ್ವರಿ ಸಭಾಂಗಣದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ.
ಬರಗಾಲ ನಿರ್ವಹಣೆಯಲ್ಲಿ ಕಂದಾಯ ಇಲಾಖೆ ಪಾತ್ರ ಬಹುಮುಖ್ಯ.ಸಮಸ್ಯೆಗಳು ಉಲ್ಬಣಿಸುವ ಮುನ್ನವೇ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು.
ಕಂದಾಯ ಇಲಾಖೆಯ ಕೆಲಸದ ವಿಳಂಬ ಬಗ್ಗೆಯೇ ಜನರು ಮಾತನಾಡುತ್ತಿದ್ದಾರೆ.ಸಿಎಂ ಜನತಾ ದರ್ಶನದಲ್ಲಿ ಕಂದಾಯ ಇಲಾಖೆಯ ಸಮಸ್ಯೆ ಬಗ್ಗೆ ಹೆಚ್ಚಿನ ಆಗಮಿಸುತ್ತಿದ್ದಾರೆ. ನಾವು ತಾಳ್ಮೆಯಿಂದ ಹೇಳುತ್ತಿದ್ದೇವೆ.
ಅದನ್ನ ಕೆಲವರು ಉದಾಸೀನವಾಗಿ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ದರ್ಬಾರ್ ನಡೆಸುವ ಸಂಸ್ಕೃತಿಯಲ್ಲಿ ನಾವಿದ್ದೇವೆ. ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಕೆಲಸ ಮಾಡಬೇಕು ಎಂದು
ಅಧಿಕಾರಿಗಳಿಗೆ ಸಚಿವರು ಬೆಂಡೆತ್ತಿದ್ದರು
ಸಭೆಯಲ್ಲಿ ಶಾಸಕ ಜಿಟಿ ದೇವೇಗೌಡ, ವಿಧಾನಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ.
ಡಿಸಿ ಡಾ ಕೆವಿ ರಾಜೇಂದ್ರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು