ಬೆಂಗಳೂರು: ಕೋರೋನ ಹೊಸ ರೂಪಾಂತರದ ಜೆಎನ್.1 ಪಾಸಿಟಿವ್ ಪ್ರಮಾಣದ ಸಂಖ್ಯೆ ಏರಿಕೆಯಾದ ಒಂದು ತಿಂಗಳ ನಂತರ, ಕಡಿಮೆಯಾಗಿದ್ದು ರಾಜ್ಯವು ಈಗ ಸಕ್ರಿಯ ಪಾಸಿಟಿವ್ ಪ್ರಕರಣಗಳು, ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು covid ಪರೀಕ್ಷೆ ಗಳನ್ನು ಮಾಡುವ ಸಂದರ್ಭ ಎದುರಾಗಿತ್ತು,ನಡೆಸಲಾಗುತ್ತಿರುವ ಪರೀಕ್ಷೆಗಳ ಸಂಖ್ಯೆಯು ದಿನಕ್ಕೆ ಸುಮಾರು 700 ಪರೀಕ್ಷೆಗಳಿಂದ ದಿನಕ್ಕೆ 8,000 ಕ್ಕೆ ಏರಿಕೆಯಾಗಿತ್ತು. ಡಿಸೆಂಬರ್ 19, 2023 ರಂದು ಕೇವಲ 79 ಸಕ್ರಿಯ ಪ್ರಕರಣಗಳಿಂದ, ಡಿಸೆಂಬರ್ 31 ರ ವೇಳೆಗೆ 1,000 ಪಾಸಿಟಿವ್ ಪ್ರಕರಣಗಳನ್ನು ತಲುಪುವವರೆಗೆ ಪ್ರಕರಣಗಳು ಜಾಸ್ತಿ ಆಗುತ್ತಲೇ ಇದ್ದವು, ಮತ್ತು ಜನವರಿ 4 ರ ಹೊತ್ತಿಗೆ ಪ್ರಕರಣಗಳು 1240 ಕ್ಕೆ ತಲುಪಿತ್ತು
ಅಲ್ಲಿಂದೀಚೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆಯು ಕೆಳಮುಖ ಪ್ರವೃತ್ತಿಯನ್ನು ಕಂಡಿದ್ದು. ಜನವರಿ 10 ರ ವೇಳೆಗೆ, ಸಕ್ರಿಯ ಪ್ರಕರಣಗಳು 974 ರಷ್ಟಿದ್ದು, ಮಂಗಳವಾರ (ಜನವರಿ 16) ಪ್ರಕರಣಗಳು 751 ಕ್ಕೆ ಇಳಿದಿವೆ.
ಸುಮಾರು 6,143 ಪರೀಕ್ಷೆಗಳನ್ನು ಮಾಡಲಾಗಿದ್ದು, ಮಂಗಳವಾರ 63 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ ಮತ್ತು 36 ಜನರನ್ನು ರಾಜ್ಯಾದ್ಯಂತ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಮತ್ತು ಯಾವುದೇ ಸಾವುಗಳು ವರದಿಯಾಗಿಲ್ಲ.
ಆದರೂ ಜನರು ಮಾಸ್ಕ್ ಬಳಕೆ ಹಾಗೂ ಇತರ ಮುನ್ನೆಚ್ಚರಿಕೆ ವಹಿಸುವುದರಿಂದ ಇತರ ಅನಾಹುತಗದಿಂದ ದೂರವಿರಬಹುದು ಎಂದು ತಜ್ಞರು ಅಭಿಪರಾಯಪಟ್ಟಿದ್ದಾರೆ