ಮೈಸೂರು : ಮೈಸೂರಿನಿಂದ ಅಯೋಧ್ಯೆ ಗೆ ಫೆ. 4 ರಿಂದ 15 ದಿನಕ್ಕೆ ಒಂದು ರೈಲು ಸಂಚಾರ ಮಾಡುತ್ತದೆ.
ಫೆ. 4 ರಂದು ರಾತ್ರಿ 12.5 ಕ್ಕೆ ಮೊದಲ ಪ್ರಯಾಣ ಆರಂಭ.
1,280 ಆಸನ ವ್ಯವಸ್ಥೆ ಇದೆ ಬುಕಿಂಗ್ ಓಪನ್ ಆಗಿಲ್ಲ. ಇದಕ್ಕಾಗಿ ತಯಾರಿ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಕೋಲಾರದಲ್ಲಿ ರಾಮನ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ರಾಮನಿಗೆ ಮನ್ನಣೆ ಇಲ್ಲ ಎಂಬುದು ಸದಾ ಕಾಲದ ಸತ್ಯ.
ರಾಜ್ಯದಲ್ಲಿ ರಾಮ ಭಕ್ತರ ಆಶಯಕ್ಕೆ ಪೂರಕವಾದ ಸರ್ಕಾರ ಇಲ್ಲ ಎಂಬುದು ಜನರಿಗೆ ಅರ್ಥವಾಗುತ್ತಿದೆ ಎಂದರು.
ತಮ್ಮ ತಂದೆಯೇ ಐದು ವರ್ಷ ಸಿಎಂ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪಸಿಂಹ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಬಗ್ಗೆ ನನಗೆ ಪಾಪ ಅನ್ನಿಸುತ್ತದೆ. ಎಸ್.ಎಂ ಕೃಷ್ಣ ನಂತರ ಮತ್ತೊಮ್ಮೆ ಅವಕಾಶ ಬಂದಿದೆ ಅಂತಾ ಡಿಕೆಶಿ ಚುನಾವಣೆ ಗೆ ಮುನ್ನ ಒಕ್ಕಲಿಗರಿಗೆ ಹೇಳಿದ್ದರು. ಡಿ.ಕೆ. ಶಿವಕುಮಾರ್ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಗೂ ಬಂಡವಾಳ ಹಾಕಿದ್ದರು.
ಅಧಿಕಾರ ಬಂದ ಮೇಲೆ ಸಿದ್ದರಾಮಯ್ಯ ಹಠ ಹಿಡಿದು. ಮೊದಲ ಅವಧಿಗೆ ಸಿಎಂ ಆದರು.
ಸಿಎಂ ಕುರ್ಚಿಯಲ್ಲಿ ಕೂತ ಕೂಡಲೇ ಪೂರ್ಣಾವಧಿ ಸಿಎಂ ಆಗುವ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದರು.
ಎಂ.ಬಿ. ಪಾಟೀಲ್, ಸತೀಶ್ ಜಾರಕಿ ಹೊಳಿ, ರಾಜಣ್ಣ ಮೂಲಕ ಮೊದಲು ಸಿಎಂ ಹೇಳಿಕೆ ಕೊಡಿಸಿದ್ದರು.
ಈಗ ಮಗನ ಕೈಯಲ್ಲಿ ಪೂರ್ಣಾವಧಿ ಸಿಎಂ ಅಂತಾ ಹೇಳಿಕೆ ಕೊಡಿಸಿದ್ದಾರೆ. ಮಗನ ಮೂಲಕ ಡಿಕೆ ಶಿವಕುಮಾರ್ ಗೆ ಸಂದೇಶ ರವಾನಿಸಿದ್ದಾರೆ.
ಸ್ವಜಾತಿ ಅವರು ಹಾಗೂ ಮುಸ್ಲಿಂರು ತಮ್ಮ ತಂದೆಯೆ ಕೈ ಹಿಡಿದರು ಎಂದು ಯತೀಂದ್ರ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆ ಮತಹಾಕಿದ್ದು ಒಕ್ಕಲಿಗರು ಅಲ್ವಾ ?
ವರುಣಾದಲ್ಲಿ ಲಿಂಗಾಯತರು ತಾನೇ ನಿಮಗೆ ಮತ ಹಾಕಿದ್ದು. ಡಿಕೆಶಿಯ ಎದೆಗೆ ಸಿದ್ದರಾಮಯ್ಯ ಮಗನ ಹೆಗಲ ಮೇಲೆ ಗನ್ ಇಟ್ಟು ಹೊಡೆದಿದ್ದಾರೆ. ಡಿಕೆ ಶಿವಕುಮಾರ್ ಅವರೇ ನಿಮ್ಮ ವಿರೋಧಿಗಳು ಬೇರೆ ಎಲ್ಲೂ ಇಲ್ಲ.
ನಿಮ್ಮ ಪಕ್ಷದಲ್ಲೆ ಇದ್ದಾರೆ ಸಿದ್ದರಾಮಯ್ಯ ಅವರೆ ನಿಮ್ಮ ವಿರೋಧಿ. 39 ಲಿಂಗಾಯತರು ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಡಿಕೆ ಸಿಎಂ ಆಗುತ್ತಾರೆ ಅಂತಾ ಒಕ್ಕಲಿಗರು ಮತ ಹಾಕಿದರು. ನಿಮಗೆಲ್ಲಾ ದೋಖಾ ಆಗಿದೆ
ಸಿದ್ದರಾಮಯ್ಯ ಎಲ್ಲರ ನಡುವೆ ಜಗಳ ಇಟ್ಟು ತಾವು ಅಧಿಕಾರದಲ್ಲಿ ಮುಂದುವರಿಯವ ಪ್ರಯತ್ನ ಮಾಡುತ್ತಾರೆ.
ಸ್ವಜಾತಿ, ಮುಸ್ಲಿಂ ರ ಮೇಲೆ ಮಾತ್ರ ಸಿದ್ದರಾಮಯ್ಯ ಅವರಿಗೆ ಪ್ರೀತಿ ಎಂದು ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದರು.