ರಾಮಮಂದಿರ (Ramamandira) ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ. ರಾಮ, ಕೃಷ್ಣ, ಪರಮೇಶ್ವರನ ಮೇಲೆ ನನಗೆ ವೈಯಕ್ತಿಕವಾಗಿ ಬಹಳ ಭಕ್ತಿ ಇದೆ. ಒಂದಲ್ಲ ಒಂದು ದಿನ ಅಯೋಧ್ಯೆಗೆ ಹೋಗ್ತೀನಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ( Laskhmi Hebbalkar) ತಿಳಿಸಿದ್ದಾರೆ.
ಉಡುಪಿಯಲ್ಲಿ (Udupi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ರಾಮ, ಕೃಷ್ಣ, ಪರಮೇಶ್ವರನ ಮೇಲೆ ನನಗೆ ವೈಯಕ್ತಿಕವಾಗಿ ಬಹಳ ಭಕ್ತಿ ಇದೆ. ನಾನು ನಮ್ಮ ಸಂಸ್ಕೃತಿ, ಭಕ್ತಿಯನ್ನು ಆಚರಿಸುತ್ತೇನೆ ಎಂದು ಹೇಳಿದ್ದಾರೆ.
ರಾಮಮಂದಿರ ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡಲ್ಲ. ನಾನು ಪಕ್ಷದ ಅಧ್ಯಕ್ಷೆ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ. ಆದ್ರೆ ನಾನಂತೂ ದೈವಿ ಭಕ್ತಳು ಎಂದು ಪದೇ ಪದೇ ಹೇಳುತ್ತೇನೆ. ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗೇ ಹೋಗ್ತೀನಿ. ರಾಮ ಮಂದಿರ ಅವರದ್ದೂ ಬಿಜೇಪಿದ್ದು ಅಲ್ಲ ನಮ್ಮದೂ ಅಲ್ಲ, ಅಯೋಧ್ಯೆ ರಾಮಮಂದಿರ 140 ಕೋಟಿ ಜನರದ್ದು ಎಂದರು.