ಮೈಸೂರು : ಎಚ್.ಡಿ ಕುಮಾರಸ್ವಾಮಿ ಅವ್ರು ನಿರಂತರವಾಗಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಇಲ್ಲ ಸಲ್ಲದ ಹಿಟ್ ಅಂಡ್ ರನ್ ತರದ ಹೇಳಿಕೆಯ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು
ಎಚ್ಡಿಕೆ ಬಿಜೆಪಿ ಸ್ಪೋಕ್ ಪರ್ಸನ್ ಗಿಂತ ಚೆನ್ನಾಗಿ ಸ್ಪೋಕ್ ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ.ಇವರನ್ನು ಮುಖ್ಯಮಂತ್ರಿ ಮಾಡಿದ್ದೇ ಕಾಂಗ್ರೆಸ್ ಪಕ್ಷ.
ಪ್ರತಾಪ್ ಸಿಂಹ ಅವರ ಮೇಲೆ ಇಷ್ಟೊಂದು ಮೃದು ದೋರಣೆ ಯಾಕೆ.? ಪ್ರತಾಪ್ ಸಿಂಹನ ಸಹೋದರನ ಬಂಧನದ ಹಿಂದೆ ದೇವೇಗೌಡ ಕುಟುಂಬದ ಷಂಡ್ಯಂತ್ರ ಎಂದು ಕೆಲವು ಪತ್ರಿಕೆಗಳಲ್ಲೂ ಪ್ರಕಟಿವಾಗಿದೆ.
ಮುಂದಿನ ದಿನಗಳಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಉಳಿಸಿಕೊಳ್ಳುವ ಪ್ರತಾಪ್ ಸಿಂಹನ ರಾಜಕೀಯವಾಗಿ ಮುಗಿಸುವ ಕೆಲಸ ಮಾಡಲು ದೊಡ್ಡಗೌಡ ಕುಟುಂಬದಿಂದ ಪ್ರಯತ್ನ ನಡೆಯುತ್ತಿದೆ ಎಂದು ಪ್ರಕಟಿಸಿದೆ.
ಈ ಪತ್ರಿಕೆಗಳು ಸುಮ್ಮನೇ ಏನೂ ಬರೆದಿಲ್ಲ.
ಅದರೆ ಪ್ರತಾಪ್ ಸಿಂಹ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡಗೌಡ ಕುಟುಂಬದವರೇ ಖೆಡ್ಡಾ ತೋಡುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.
ರಾಜ್ಯದ ರೈತರ,ನಿರುದ್ಯೋಗ,ಅಭಿವೃದ್ಧಿ, ಅಣೆಕಟ್ಟು ನಿರ್ಮಾಣ ವಿಚಾರವಾಗಿ ಒಂದೂ ದಿನವೂ ಮಾತನಾಡಿಲ್ಲ.
ಕುಮಾರಸ್ವಾಮಿ ಅವರು ಹತಾಶರಾಗಿ ಈ ರೀತಿ ಮಾತಾನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಲಕ್ಷ್ಮಣ್ ವಾಗ್ದಾಳಿ ನಡೆಸಿದರು
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಜನರಿಗೆ ಭಾರಿ ಅನುಕೂಲವಾಗುತ್ತಿದೆ. ಕೆಎಸ್ಆರ್ಟಿಸಿ ಈಗ ಲಾಭದಾಯಕವಾಗಿದೆ. ರಾಜ್ಯ ಸರ್ಕಾರದ 24×7 ಕೆಲಸ ಮಾಡುತ್ತಾ. ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ರಾಜ್ಯ ಸರ್ಕಾರದ ಸಚಿವ ಸಂಪುಟದ ಸಚಿವರೂ ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸ ನೋಡಿ ತಡೆದುಕೊಳ್ಳಲಾಗದೇ ಈ ರೀತಿ ಹೇಳಿಕೆ ಕೊಡುತಿದ್ದಾರೆ ಅಷ್ಟೇ ಎಂದರು
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನಿಜವಾಗಿಯೂ ಸತ್ಯವಾಗಿದೆ. ಪ್ರತಾಪ್ ಸಿಂಹ ಏನು ರಾಷ್ಟ್ರ ಮಟ್ಟದ ನಾಯಕನಲ್ಲ. ಕೇವಲ ಸಂದಸರಷ್ಟೆ ಅವರಿಗೆ ಮೈಸೂರು ಬಿಟ್ಟರೆ ಎಲ್ಲೂ ಅವರ ಬಗ್ಗೆ ಜನರಿಗೆ ಗೊತ್ತಿಲ್ಲ.
ಒಕ್ಕಲಿಗ ಯುವಕರನ್ನ ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಪ್ರತಾಪ್ ಸಿಂಹ ಮಾಡುತ್ತಿದ್ದಾರೆ.
ಡಿಕೆಶಿ ಅವರನ್ನ ಮುಗಿಸಲು ಬಿಜೆಪಿ ಜೆಡಿಎಸ್ ಮಾಡುತ್ತಿದೆ.
ಹೇಗಾದರೂ ಮಾಡಿ ಡಿಕೆಶಿ ಅವರನ್ನು ಜೈಲಿಗೆ ಕಲಿಸಬೇಕು ಎಂಬ ದೊಡ್ಡ ಅಜೆಂಡಾವನ್ನ ಇಟ್ಟುಕೊಂಡಿದೆ.
ಇದನ್ನೆಲ್ಲಾ ಎದುರಿಸುವ ಧೈರ್ಯ,ಕಾಂಗ್ರೆಸ್ ಗೆ ಇದೇ ಎಂದು ಹೇಳಿದರು