ಮೈಸೂರು : ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ರವರ ಟೀಕೆ ವಿಚಾರವಾಗಿ ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ.
ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದು ಬರವಣಿಗೆ ಮೂಲಕ ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆ.
ಅಪ್ಪ ಸಿಎಂ ಆಗಿದ್ದರೆ ತನ್ನ ಖಾಸಗಿ ಲ್ಯಾಬ್ ಗೆ ಗುತ್ತಿಗೆ ಪಡೆದು ಕೊಳ್ಳುವಂತವರು ನ್ಯಾಷನಲ್ ಲೀಡರ್.
ಅಪ್ಪನ ನೆಲೆ ಬಿಡಿಸಿ ಬದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್ ಎಂದು ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.
ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅಂತಾ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್.
ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ
ಅಯೋಧ್ಯೆ ಮಂತ್ರಾಕ್ಷತೆ ಗೆ ಅನ್ನಭಾಗ್ಯ ಅಕ್ಕಿ ಬಳಕೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈಗಳಿಗೆ ಮಂತ್ರಾಕ್ಷತೆ ಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ ? ಅಕ್ಷತೆ, ಗೋತ್ರದ ಮೇಲೆ ಕಾಂಗ್ರೆಸ್ ಗೆ ಸಿದ್ದರಾಮಯ್ಯಗೆ ನಂಬಿಕೆ ಇಲ್ಲ.ಅಯೋಧ್ಯೆಗೆ ಹೋಗುವುದು ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ. ರಾಮನ ಪೇಟೆಂಟ್ ಅನ್ನು ಬಿಜೆಪಿ ಗೆ ಕೊಟ್ಟಿದ್ದೆ ಕಾಂಗ್ರೆಸ್ ಎಂದರು.
ರಾಮನನ್ನು ಕಾಂಗ್ರೆಸಿಗರೆ ಭಕ್ತಿ ಭಾವದಿಂದ ಪೂಜಿಸಿದ್ದರೆ ಬಿಜೆಪಿಗೆ ಯಾಕೆ ಈ ಪೇಟೆಂಟ್ ಸಿಗುತ್ತಿತ್ತು ?
ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕಾಂಗ್ರೆಸ್ ಗೆ ರಾಮ ಏನೂ ಬಿಜೆಪಿ ಪೇಟೆಂಟ್ ಹಾ ಎಂದು ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್ಗೆ ರಾಮ ರಾಜ್ಯದ ಮೇಲೆ ನಂಬಿಕೆ ಇದ್ಯಾ?ರಾವಣ ರಾಜ್ಯದ ಮೇಲೆ ನಂಬಿಕೆ ಇದ್ಯಾ ಅವರನ್ನೇ ಕೇಳಿ ? ಕಾಂಗ್ರೆಸ್ ಗೆ ಗಾಂಧೀಜಿಯ ರಾಮ ರಾಜ್ಯದ ಮೇಲೆ ನಂಬಿಕೆ ಇಲ್ಲ ಎಂದು ವ್ಯಂಗ್ಯವಾಡಿದರು