ಮೈಸೂರು: ಬಿ.ಕೆ ಹರಿಪ್ರಸಾದ್ ಅವ್ರನ್ನ ಒಳಗೆ ಹಾಕಬೇಕು.ಮಂಪರು ಪರೀಕ್ಷೆ ಮಾಡಬೇಕು.
ಈ ನಿರ್ಧಾರವನ್ನ ಮುಖ್ಯಮಂತ್ರಿಗಳು ತಕ್ಷಣ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸಚಿವರ ಹೇಳಿಕೆಗಳು, ಶಾಸಕರ ಹೇಳಿಕೆಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ.ಆಡಳಿತ ಪಕ್ಷದಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ ಎಂದರು.
ಡಿಕೆ ಹಳ್ಳಿ ಕೆಜೆ ಹಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿ
ಹಿಂದೂ ಕಾರ್ಯಕರ್ತರನ್ನ ಬೆದರಿಸುವ ಕೆಲಸವನ್ನ ಕಾಂಗ್ರೆಸ್ ಪಕ್ಷ ಮಾಡ್ತಿದೆ.ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನ ಓಲೈಸುವ ಕೆಲಸ ಮಾಡ್ತಿದೆ.
ಹಿಂದೂ ಕಾರ್ಯಕರ್ತರನ್ನ ಬಂಧಿಸೋದು.
ಯಾರು ಪೊಲೀಸ್ ಸ್ಟೇಷನ್‌ಗೆ ಬೆಂಕಿ ಇಟ್ಟವರನ್ನ ಅಮಾಯಕರು ಅನ್ನೊದು.ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ.ಇದನ್ನ ನಾವು ಖಂಡಿಸುತ್ತೇವೆ ಎಂದು ಹೇಳಿದರು